ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಸೇವೆಯಿಂದ ಜೀವನ ಸಾರ್ಥಕ

Last Updated 21 ನವೆಂಬರ್ 2022, 7:40 IST
ಅಕ್ಷರ ಗಾತ್ರ

ಯಾದಗಿರಿ: ‘ಸಾಮಾಜಿಕವಾಗಿ ಉತ್ತಮ ಸ್ಥಾನಮಾನ ಮತ್ತು ಉನ್ನತ ಜೀವನಮಟ್ಟ ಹೊಂದಿದವರು ಸಾಮಾಜಿಕ ಕಳಕಳಿಯ ಕಾರ್ಯ ಮಾಡಬೇಕು. ಸಮಾಜದ ಕುರಿತ ಜವಾಬ್ಧಾರಿ ಅರಿತು ಕೈಗೊಳ್ಳುವ ಸೇವಾ ಚಟುವಟಿಕೆಗಳಿಂದ ಜೀವನ ಸಾರ್ಥಕವಾಗುತ್ತದೆ’ ಎಂದು ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಅಭಿಪ್ರಾಯಪಟ್ಟರು.

ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡ ಡಾ.ಎಸ್.ಬಿ.ಕಾಮರೆಡ್ಡಿ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಎಸ್.ಬಿ. ಕಾಮರೆಡ್ಡಿ ಮಾತನಾಡಿದರು. ಹೆಡಗಿಮದ್ರಾದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ಗೋನಾಲದ ದುರ್ಗಾದೇವಿ ಮರಿಸ್ವಾಮಿ, ಮುಖಂಡರಾದ ಶರಣಪ್ಪಗೌಡ ಮಲ್ಹಾರ, ಶಾಂತರೆಡ್ಡಿ ದೇಸಾಯಿ, ಬಸವರಾಜ ಸೊನ್ನದ, ಶಂಕರಗೌಡ ಮಾಲಿಪಾಟೀಲ, ನಂದಣ್ಣಗೌಡ ಹೊರಟೂರ, ಚಂದ್ಋಶೇಖರಗೌಡ ಗೋನಾಲ, ಮಂಜುಳಾ ಗೂಳಿ, ಮಾಣಿಕರೆಡ್ಡಿ ಕುರಕುಂದಿ, ಚೌಡಯ್ಯ ತುಮಕೂರ, ಶಂಕರಲಿಂಗಪ್ಪ ಬೋಳಶೆಟ್ಟಿ, ದಿನೇಶ, ಡಾ.ಪ್ರತಿಮಾ ಕಾಮಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT