ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದನೂರಿನ ಕಂಠಿ ಮಠ ಪುಣ್ಯ ಕ್ಷೇತ್ರ

ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿಕೆ
Last Updated 19 ಡಿಸೆಂಬರ್ 2019, 10:40 IST
ಅಕ್ಷರ ಗಾತ್ರ

ಕೆಂಭಾವಿ: ಮುದನೂರ ಕಂಠಿ ಹನುಮಾನ ದೇವಾಸ್ಥಾನ ಹಾಗೂ ಕೋರಿಸಿದ್ದೇಶ್ವರ ಶಾಖಾ ಮಠವು ತಪೋ ತಾಣವಾಗಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

ಮುದನೂರ ಗ್ರಾಮದ ಕಂಠಿ ಹನುಮಾನ ದೇವಸ್ಥಾನದ ಕೋರಿಸಿದ್ದೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಕಂಠಿ ಹನುಮಂತ ದೇವರ 21ನೇ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಏರ್ಪಡಿಸಿದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರು ಭಕ್ತರ ಕಷ್ಟ ಕಳೆಯುವ ತಪಸ್ವಿಯಾಗಿದ್ದಾರೆ. ಎಲ್ಲರನ್ನೂ ಸನ್ಮಾರ್ಗದಲ್ಲಿ ಕರೆದ್ಯೊಯುವ ಕೆಲಸ ಮಾಡುತ್ತಿರುವುದು ಸೇವೆ ದೊಡ್ಡದು ಎಂದರು.

ಸ್ವಾಮೀಜಿ ಮಠವನ್ನು ಪುಣ್ಯ ಕ್ಷೇತ್ರ ವನ್ನಾಗಿಸಿದ್ದಾರೆ. ಮಠಕ್ಕೆ ಸಾವಿರಾರು ಜನರನ್ನು ಆಸ್ತಿಯನ್ನಾಗಿಸಿದ್ದಾರೆ. ಕಂಠಿ ಹನುಮಾನ ದೇವಸ್ಥಾನ ಹಾಗೂ ಕೋರಿಸಿದ್ದೇಶ್ವರ ಶಾಖಾ ಮಠ ಶಕ್ತಿ ಕೇಂದ್ರವಾಗಿದೆ ಎಂದರು.

ಮಠಾಧ್ಯಕ್ಷ ಸಿದ್ದಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರು, ಶಾಂತ ರುದ್ರಮುನಿ ಸ್ವಾಮೀಜಿ, ಗುರು ಶಾಂತವೀರ ಶಿವಾ ಚಾರ್ಯರು ಅಮ್ಮಾಪೂರ, ರುದ್ರಮುನಿ ಶಿವಾಚಾರ್ಯರು ಯಡ್ರಾಮಿ, ವಿಶ್ವರಾಧ್ಯ ದೇವರು ಚಟ್ನಳ್ಳಿ, ಭೀಮರಾಯ ಸಾಹು ಹೊಟ್ಟಿ, ಚಂದ್ರಾಯಗೌಡ ದೇವಣಗಾಂವ್ ಗೋಗಿ, ದೇವಣ್ಣಗೌಡ ಮಲಗಲದಿನ್ನಿ, ಭೀಮರೆಡ್ಡಿ ಬೆಕಿನಾಳ, ರಮೇಶ ಚೌದ್ರಿ, ಭೀಮನಗೌಡ ಕರಡಕಲ್, ವಿರೇಶರೆಡ್ಡಿ ಮುದನೂರ ಇದ್ದರು. ಬಸವರಾಜ ಬಂಟನೂರ ಹಾಗೂ ಯಮನೇಶ ಯಾಳಗ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಶಾಂತರೆಡ್ಡಿ ಚೌದ್ರಿ ಸ್ವಾಗತಿಸಿದರು. ಮಡಿವಾಳಯ್ಯ ಶಾಸ್ತ್ರಿ
ನಿರೂಪಿಸಿದರು. ಮಲ್ಲು ಬ್ಯಾದಾಪೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT