ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ಅನುರಣಿಸಿದ ಕನ್ನಡ ಕಲರವ

ವಿವಿಧ ಸಂಘ–ಸಂಸ್ಥೆಗಳಲ್ಲಿ ಧ್ವಜಾರೋಹಣ, ಕನ್ನಡ ಉಳಿಸಿ ಬೆಳೆಸಲು ಕರೆ
Last Updated 1 ನವೆಂಬರ್ 2020, 16:13 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಕನ್ನಡ ರಾಜ್ಯೋತ್ಸವ ಸರಳವಾಗಿ ಆಚರಿಸಲಾಯಿತು.

ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಜೆಡಿಎಸ್‌ ಕಾರ್ಯಾಲಯ: ಕನ್ನಡ ಭಾಷೆಗೆ ಕರ್ನಾಟಕದಲ್ಲಿ ಮೊದಲ ಆದ್ಯತೆ ಸಿಗಬೇಕು. ಇದನ್ನು ಎಲ್ಲ ಸಮುದಾಯ, ಜಾತಿ ಮತ ಪಂಥ ಬೇಧವೆಣಿಸದೇ ಪಾಲಿಸಬೇಕು. ಇದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಬೇಕೆಂದು ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ನಮಿಸಿ ಮಾತನಾಡಿದರು.

ಕನ್ನಡ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕನ್ನಡ ಬೆಳೆಸುವ ಜವಬ್ದಾರಿ ಹೊಂದಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಗರಾಧ್ಯಕ್ಷ ವಿಶ್ವನಾಥ ಸಿರವಾರ ಮಾತನಾಡಿ, ಕನ್ನಡ ನಾಡು ಅಸ್ತಿತ್ವಕ್ಕೆ ಬಂದ ಈ ಸುದಿನವನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಇದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಕಂಕಣ ಬದ್ಧರಾಗಿರಬೇಕೆಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷ ಚನ್ನಪ್ಪಗೌಡ ಮೊಸಂಬಿ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಅನಪುರ, ಮುಖಂಡರಾದ ಶರಣಪ್ಪ ಗುಳಗಿ, ಹಣಮಂತರಾಯ ಗೌಡ, ರಾಜಶೇಖರ ಗೌಡ ದೊರೆ, ರಫೀಕ ಉಳ್ಳೆಸೊಗೊರ, ಜೆಡಿಎಸ್ ಮುಖಂಡ ಬಾಲಪ್ಪ ಚಿಕ್ಕಮೇಟಿ, ಮಲ್ಲಿಕಾರ್ಜುನ ಮೇಟಿ, ಮಾರ್ತಾಂಡಪ್ಪ ಕಂಬಾರ, ವಿನೋದರೆಡ್ಡಿ ತಳಕ, ಸುಭಾಷ್ ಬಾಚವಾರ, ಬಸವರಾಜ ಬಾವುರ, ದೇವು ತುಮಕೂರು, ಬಸವರಾಜ ಗಿರೆಪ್ಪನೊರ ಇದ್ದರು

ಶಾಸಕರ ಕಾರ್ಯಾಲಯ: ಯಾದಗಿರಿ ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ಮತ್ತು ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ ನೇತೃತ್ವದಲ್ಲಿ ಶಾಸಕರ ಜನಸಂಪರ್ಕ ಕಚೇರಿಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಮತ್ತು ಧ್ವಜಾರೋಹಣ ನೆರವೇರಿಸಲಾಯಿತು.

ಈ ವೇಳೆ ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಮಲ್ಲನಗೌಡ ಹತ್ತಿಕುಣಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಖಂಡಪ್ಪ ದಾಸನ್, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ ರಾಠೋಡ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡರಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ನಗರಸಭೆ ಸದಸ್ಯರಾದ ಕಿಟ್ಟು, ಸ್ವಾಮಿದೇವ, ಹಣಮಂತ ವಲ್ಯಾಪುರೆ ಇದ್ದರು.

ಬಿಜೆಪಿ ಕಾರ್ಯಾಲಯ: ನವೆಂಬರ್ 1 ರಂದು ಕನ್ನಡತನ ತೋರಿಸಿದರೆ ಸಾಲದು, ವರ್ಷದ 365 ದಿನವೂ ಕನ್ನಡತನ ಮೆರೆಯಬೇಕು ಎಂದು ಬಿಜೆಪಿ ಜಿಲ್ಲಾಧಕ್ಷ ಡಾ.ಶರಣಭೂಪಾಲರಡ್ಡಿ ತಿಳಿಸಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು. ಭಾಷೆಗಳ ಜೊತೆ ಮಿಶ್ರಿತ ಕನ್ನಡ ಬಳಕೆಯಾಗುತ್ತಿದೆ. ಸ್ವಚ್ಛಗನ್ನಡ ಬಳಸಲು ಮುಂದಾಗಬೇಕು ಎಂದರು.

ಈ ಶಾಸಕ ವೆಂಕಟರಡ್ಡಿ ಮುದ್ನಾಳ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಲಲಿತಾ ಅನಪುರ, ಖಂಡಪ್ಪ ದಾಸನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆತುಮಕೂರ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್‌, ಭೀಮಣ್ಣಗೌಡ ಕಾತ್ಯನಾಳ, ನಗರಸಭಾ ಸದಸ್ಯರಾದ ಸುರೇಶ್ ಅಂಬಿಗೇರ, ಸ್ವಾಮಿದೇವ ದಾಸನಕೇರಿ, ಅಂಬಯ್ಯ ಶಾಬಾದಿ, ಶಕುಂತಲಾ ಜಿ, ಮಂಜುನಾಥ ಜಡಿ, ಮಲ್ಲಣ್ಣಗೌಡ ಗುರಸುಣಿಗಿ, ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರ, ಹಣಮಂತ ವಲ್ಯಾಪುರ ಸೇರಿದಂತೆ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ಕರವೇ ಕಾರ್ಯಾಲಯ: ಕನ್ನಡ ನಾಡು, ನುಡಿ ಉಳಿವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ಶ್ಲಾಘನೀಯ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಹನುಮೇಗೌಡ ಬೀರನಕಲ್ ಅಭಿಪ್ರಾಯಪಟ್ಟರು.

ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡ ಧ್ವಜಾರೋಹಣದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮಾತನಾಡಿ, ಕನ್ನಡ ನಾಡು ನುಡಿ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮರಲಿಂಗಪ್ಪ ಕರ್ನಾಳ, ಹಣಮಂತ ಕಾನಳ್ಳಿ, ರಫೀಕ್ ಅಹ್ಮದ್ ಉಳ್ಳೆಸೂಗೂರು, ಹಣಮಂತ ನಾಯಕ, ಮಲ್ಲಿಕಾರ್ಜುನಗೌಡ, ಕರವೇ ತಾಲ್ಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ವಿಶ್ವರಾಧ್ಯ ದಿಮ್ಮೆ, ಅಂಬ್ರೇಶ ಹತ್ತಿಮನಿ, ರಿಯಾಜ್ ಪಟೇಲ್, ವಿಜಯ ವರ್ಕನಳ್ಳಿ, ವಿಜಯ ರಾಠೋಡ, ಹಣಮಂತ ತಾತಳಗೇರಾ, ಸಿದ್ದು ಸಾಹುಕಾರ, ಮಹೇಶ ಠಾಣಗುಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT