ಕಾರ ಹುಣ್ಣಿಮೆ: ಸೀರೆಯುಟ್ಟ ಸಂಭ್ರಮಿಸಿದ ಮಕ್ಕಳು

7

ಕಾರ ಹುಣ್ಣಿಮೆ: ಸೀರೆಯುಟ್ಟ ಸಂಭ್ರಮಿಸಿದ ಮಕ್ಕಳು

Published:
Updated:
ಕೆಂಭಾವಿಯಲ್ಲಿ ಶುಕ್ರವಾರ ಮಕ್ಕಳು ಕಾರ ಹುಣ್ಣಿಮೆ ಸಸಿ ಆಟ ಆಡಿ ಸಂಭ್ರಮಿಸಿದರು.

ಕೆಂಭಾವಿ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಕಾರ ಹುಣ್ಣಿಮೆ ಮಾರನೇಯ ದಿನವಾದ್ದರಿಂದ ಮಕ್ಕಳು ಸಸಿ ಆಟವಾಡಿ ಸಂಭ್ರಮಿಸಿದರು.

ಮಕ್ಕಳು ಕಳೆದ ಹದಿನೈದು ದಿನಗಳ ಹಿಂದೆ ಹಾಕಿದ ಗೋದಿ, ಸಜ್ಜೆ, ಜೋಳ, ಭತ್ತ ಇನ್ನಿತರ ಕಾಳುಗಳನ್ನು ಟೆಂಗಿನಕಾಯಿ ಚಿಪ್ಪಿನಲ್ಲಿ ಹಾಕಿ ಬೆಳೆಸುತ್ತಾರೆ. ಬೆಳೆದಂತ ಸಸಿಗಳನ್ನು ಕಾರ ಹುಣ್ಣಿಮೆಯ ಮಾರನೇದಿನ ಹಿರಿಯರಂತೆ ಸೀರೆಯನ್ನುಟ್ಟ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸಿ, ಜನಪದ ಹಾಡುಗಳನ್ನು ಹಾಡಿ ಕುಣಿದಾಡುತ್ತಾರೆ.

ಅಲ್ಲದೆ ಕೆಲವುಕಡೆ ಹೆಣ್ಣು ಮಕ್ಕಳಿಬ್ಬರನ್ನು ಮದುಮಕ್ಕಳಂತೆ ಶೃಂಗರಿಸಿ ಮದುವೆಯಂತೆ ಆಟವಾಡುವ ಸಂಪ್ರದಾಯವೂ ಇದೆ. ಪಟ್ಟಣ ಸೇರಿದಂತೆ, ಪರಸನಹಳ್ಳಿ, ಕರಡಕಲ್, ಯಾಳಗಿ, ಮುದನೂರ, ಕೂಡಲಗಿ, ಹೆಗ್ಗನದೊಡ್ಡಿ ಗ್ರಾಮಗಳಲ್ಲಿ
ಕಾರಹುಣ್ಣಿಮೆ ಖುಷಿ ತುಂಬಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !