ಹುಣಸಗಿ: ತಾಲ್ಲೂಕಿನ ಮುದನೂರು.ಬಿ ಗ್ರಾಮದಿಂದ ತಳ್ಳಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದೆ. ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಇನ್ನೂ ಸುಸಜ್ಜಿತ ರಸ್ತೆ ನಿರ್ಮಾಣ ಭಾಗ್ಯ ಕೂಡಿ ಬಂದಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ವೈಯಕ್ತಿಕವಾಗಿ ಹಣ ಸಂಗ್ರಹಿಸಿ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.

ಈ ಕುರಿತಂತೆ ಗ್ರಾಮಸ್ಥರು ಸಭೆ ಸೇರಿ ಈ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ಗ್ರಾಮದ ಕೆಲವು ಮುಖಂಡರ ತಂಡದೊಂದಿಗೆ ಭೂಮಿಪೂಜೆ ನಡೆಸಿ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.

ಮುದನೂರು.ಕೆ ಗ್ರಾವು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು ಸುಮಾರು 8 ಜನ ಸದಸ್ಯರಿದ್ದಾರೆ. ಮುದನೂರು.ಬಿ ಗ್ರಾಮದಿಂದ 7 ಜನ ಸದಸ್ಯರಿದ್ದು, ಸುಮಾರು 1,000ಕ್ಕೂ ಹೆಚ್ಚು ಮನೆಗಳಿವೆ.

ಮುದನೂರು ಗ್ರಾಮದಿಂದ ತಳ್ಳಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಹದಗೆಟ್ಟಿದೆ. ಇದೇ ಮಾರ್ಗದಲ್ಲಿ ಸಾವಿರಾರು ಎಕರೆ ಜಮಿನುಗಳಿವೆ. ಆದರೆ ರಸ್ತೆ ಹಾಗಿದ್ದರಿಂದ ನಮ್ಮ ಸಮಸ್ಯೆ ದೇವರಿಗೆ ಪ್ರೀತಿ ಎನ್ನುವಂತಾಗಿದೆ ಎನ್ನುತ್ತಾರೆ ಚನ್ನಯ್ಯಸ್ವಾಮಿ ಹಿರೇಮಠ ಹಾಗೂ ಅಲ್ಲಿಸಾಬ್ ನಾಶಿ ಹಾಗೂ ರೈತರು.

ಈಗಾಗಲೇ ಸುಮಾರು ಮೂರು ಲಕ್ಷ ಹಣ ಸಂಗ್ರಹಿಸಿ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿದ್ದು, ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಹಣ ಸಂಗ್ರಹಿಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದರು.

ಮುದನೂರು ಗ್ರಾಮದಿಂದ ತಳ್ಳಳ್ಳಿಗೆ ಹೋಗುವ ಸುಮಾರು 6 ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿ ಕೆಲಸ ಆರಂಭಿಸಿದ್ದಾರೆ. ಈ ರಸ್ತೆ ನಿರ್ಮಾಣದಿಂದ ಮುದನೂರು, ಕಾಚಾಪೂರು ತಳ್ಳಳ್ಳಿ, ಹೂವಿನಹಳ್ಳಿ ಸೇರಿದಂತೆ ಇತರ ಗ್ರಾಮಗಳ ಹೆಚ್ಚಿನ ಸಂಖ್ಯೆಯ ರೈತರಿಗೆ ಅನುಕೂಲವಾಗಲಿದೆ. ಈ ರಸ್ತೆ ಸುರಪುರ ಹುನಗುಂದ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವುದರಿಂದ ನೆರೆಯ ತಾಳಿಕೋಟಿಗೆ ಹೋಗಲು ಸಹಿತ ಅನುಕೂಲವಾಗಲಿದೆ ಎಲ್ಲ ಗ್ರಾಮದ ಜನರಿಗೆ ಅನುಕೂಲವಾಗಲಿ ಎನ್ನುತ್ತಾರೆ ಬಂದಿಗೀಸಾಬ್ ಶಿವಪೂರ್ ಹಾಗು ಸತೀಶ ರಸ್ತಾಪುರ.

ಈ ರಸ್ತೆಗೆ ಹೊಂದಿಕೊಂಡಂತೆ ಸಾವಿರಾರು ಎಕರೆ ಜಮೀನು ಇದೆ. ಮಳೆಗಾಲದಲ್ಲಿ ಹೊಲಗಳಿಗೆ ತೆರಳಲು ರೈತರು ಸಾಕಷ್ಟು ಪ್ರಯಾಸ ಪಡುತ್ತಿದ್ದರು. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಎಕರೆಗೆ ಒಂದು ಸಾವಿರದಂತೆ ಹಣ ಸಂಗ್ರಹಿಸಿ ರಸ್ತೆ ನಿರ್ಮಾಣ ಆರಂಭಿಸಿದ್ದಾರೆ.

ಮುದನೂರು ಗ್ರಾಮದಿಂದ ಯಾಳಗಿ ಹೋಗುವ ರಸ್ತೆ, ಮುದನೂರು ಅಮಲಿಹಾಳ ರಸ್ತೆ ಮುದನೂರು ಹೂವಿನಹಳ್ಳಿ ರಸ್ತೆಗಳು ಸಹಿತ ಇದೇ ಸ್ಥಿತಿಯಲ್ಲಿ ಇವೆ ಆದ್ದರಿಂದ ಸರ್ಕಾರ ಮತ್ತು ಜನಪ್ರತಿನಿಧಿಗಳು ಸೂಕ್ತ ರಸ್ತೆ ಸಂಪರ್ಕ ವ್ಯವಸ್ಥೆಗೆ ಮುಂದಾಗುವಂತೆ ಮಲ್ಲನಗೌಡ ನಗನೂರ, ಭೀಮರೆಡ್ಡಿ ಬೇಕಿನಾಳ, ಯಮನಪ್ಪಗೌಡ ಗೌಡಪ್ಪಗೋಳ, ಹೊನ್ನಪ್ಪ ಮೇಟಿ ಗೌಡ್ರ , ಶರಣಗೌಡ ಬದಲಾಪುರ, ಸಿದ್ದನಗೌಡ ಬಳವಾಟ ಒತ್ತಾಯಿಸಿದ್ದಾರೆ.

ಹಲವಾರು ವರ್ಷಗಳಿಂದಲೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದರು ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಿರಲಿಲ್ಲ. ಇದರಿಂದಾಗಿ ಬೇಸತ್ತು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
– ಪ್ರಭುಗೌಡ ಹರನಾಳ, ಗ್ರಾಮಸ್ಥ

ಮುದನೂರು ಗ್ರಾಮದಿಂದ ತಳ್ಳಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿಯೇ ನಮ್ಮ ಜಮೀನುಗಳು ಬರುತ್ತವೆ. ಮಳೆಗಾಲದ ಸಂದರ್ಭದಲ್ಲಿ ಕೂಲಿ ಕಾರ್ಮಿಕರೇ ಬರಲು ಹಿಂದೇಟು ಹಾಕುತ್ತಿದ್ದರು.
– ನಾಗರಡ್ಡಿ ಪೋತರಡ್ಡಿ, ರಾಜಮಹಮ್ಮದ ಮಕಾಂದಾರ್ ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.