ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ ಅಭಿವೃದ್ಧಿಗೆ ಹೋರಾಟ ಸಂಘಟಿಸಿ: ಹನುಮೇಗೌಡ ಬೀರನಕಲ್

ಹಯ್ಯಾಳ (ಬಿ): ಕರವೇ ವಲಯ ಹಾಗೂ ಗ್ರಾಮ ಘಟಕ ಉದ್ಘಾಟನೆ
Last Updated 14 ಡಿಸೆಂಬರ್ 2021, 3:52 IST
ಅಕ್ಷರ ಗಾತ್ರ

ವಡಗೇರಾ: ತಾಲ್ಲೂಕು ಕೇಂದ್ರವಾಗಿ ಐದು ವರ್ಷಗಳು ಕಳೆದರೂ ಇಲ್ಲಿ ತಾಲ್ಲೂಕು ಕಚೇರಿಗಳು ಇಲ್ಲದಿರುವುದರಿಂದ ಈ ಭಾಗದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಈ ಭಾಗದ ಅಭಿವೃದ್ಧಿಗಾಗಿ ಕರವೇ ಸಂಘಟನೆ ನಿರಂತರ ಹೋರಾಟ ಮಾಡಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್ ಸಲಹೆ ನೀಡಿದರು.

ತಾಲ್ಲೂಕು ಹಯ್ಯಾಳ (ಬಿ) ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವಲಯ ಘಟಕ ಮತ್ತು ಗ್ರಾಮ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡ ಭಾಷೆ, ನಾಡು ನುಡಿಗಾಗಿ ನಿರಂತರ ಹೋರಾಟ ಮಾಡುತ್ತ ಬಂದಿದೆ. ಅದರಂತೆ ಹೊಸದಾಗಿ ಆಯ್ಕೆಯಾದ ಕಾರ್ಯಕರ್ತರು ಈ ಭಾಗದ ಸಮಸ್ಯೆಗಳನ್ನು ಅರಿತು ಹೋರಾಟ ಮಾಡಿ ಅಭಿವೃದ್ಧಿ ಮಾಡಬೇಕು ಎಂದು ಹೇಳಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್ ಭೀಮು ನಾಯಕ ಮಾತನಾಡಿ, ನಮ್ಮ ಸಂಘಟನೆ ಮೂಲಕ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದೆ. ಅದರಂತೆ ನೀವು ನಮ್ಮ ಜೊತೆ ಕೈಜೋಡಿಸಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಬೇಕು. ಸಾರ್ವಜನಿಕರು, ರೈತರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಅವರ ಸಹಾಯಕ್ಕೆ ನಿಲ್ಲಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ವಲಯ ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳನ್ನು
ಆಯ್ಕೆ ಮಾಡಲಾಯಿತು.

ವಲಯ ಘಟಕ: ಸೋಮು ಕರ್ನಾಳ (ಅಧ್ಯಕ್ಷ), ಅಯ್ಯಣ್ಣ ಅನ್ಸೂರ (ಉಪಾಧ್ಯಕ್ಷ), ಪ್ರಭು, ಸಕ್ರೆಪ್ಪ, ಮಲ್ಲು, ದೇವರಾಜ, ನಿಂಗರಾಜ, ಅಯ್ಯಪ್ಪ, ಖಂಡಪ್ಪ, ಮೌನೆಶ (ಸದಸ್ಯರು).

ಗ್ರಾಮ ಘಟಕ: ಆನಂದ ಬಾಗ್ಲಿ( ಅಧ್ಯಕ್ಷ), ಬಸಣ್ಣ ಅನ್ಸೂರ (ಉಪಾಧ್ಯಕ್ಷ), ಮಹೇಶ, ಸದ್ದಾಂ, ಮಾಳೇಶ, ಅಬ್ರಾಜ್, ರವಿ, ಶಂಕ್ರಪ್ಪ, ಲಿಂಗರಾಜ (ಸದಸ್ಯರು).

ಗ್ರಾಮ ಪಂಚಾಯತಿ ಅಧ್ಯಕ್ಷ ಮೌನೇಶ ಎಸ್.ಪೂಜಾರಿ,ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಬ್ದುಲ್ ಚಿಗಾನೂರ, ಮುಖಂಡರಾದ ದೇವರ ಗೊನಾಲ ಪೂಜಾರಿ, ಸಕ್ರೆಪ್ಪ ಪೂಜಾರಿ, ನಾಗರತ್ನ ಪಾಟೀಲ ಯಕ್ಷಿಂತಿ, ಮರೆಪ್ಪ ಕರ್ನಾಳ, ರಫೀಕ್ ಪಟೇಲ್ ಉಳ್ಳೆಸುಗುರ, ಅಯ್ಯಣ್ಣ ಮುಸ್ತಜೀರ್, ನಿಂಗಣ್ಣ ಪೂಜಾರಿ, ಹೆಮ್ಮಣ್ಣ ಪೂಜಾರಿ, ದೇವಣ್ಣ ಪೂಜಾರಿ, ಚಂದಪ್ಪ ಪೂಜಾರಿ, ಚಂದ್ರಶೇಖರ ಸಾಹು, ವಿಶ್ವರಾಧ್ಯ ದಿಮ್ಮೆ, ಹಣಮಂತ ತೇಕರಾಳ, ಬಸರಡ್ಡಿಗೌಡ ಅಭಿಶಾಳ, ಭೀಮು ಬಸವಂತಪುರ, ಶರಣು ಗೋಂದೆನೂರ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕರವೇ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT