ಯಾದಗಿರಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಾತಿಗಾಗಿ ರೂಪಿಸಲಾದ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (ಕಾಮ್ಸ್ ಆ್ಯಪ್) ‘ಕರ್ತವ್ಯ’ ತಂತ್ರಾಂಶದಲ್ಲಿ ಕಲಬುರಗಿ ವಿಭಾಗದಲ್ಲಿ 34,412 ನೌಕರರು ನೋಂದಾಯಿಸಿದ್ದಾರೆ.

ಬಯೋಮೆಟ್ರಿಕ್ ಹಾಜರಾತಿ ಬದಲಾಗಿ ಕೃತಕ ಬುದ್ಧಿಮತ್ತೆ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಮುಖಚರ್ಯೆ ತಂತ್ರಜ್ಞಾನದ ‘ಕರ್ತವ್ಯ’ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ಇದು, ಶಾಲೆಗೆ ನಿಗದಿತ ಸಮಯಕ್ಕಿಂತ ತಡವಾಗಿ ಹಾಜರಾಗುವ ಹಾಗೂ ಮುಂಚಿತವಾಗಿ ಶಾಲೆಯಿಂದ ಹೊರ ಹೊಗುವ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಕಡಿವಾಣ ಹಾಕಲಿದೆ.

ಕಲಬುರಗಿ ವಿಭಾಗದ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಒಟ್ಟು 37,779 ನೌಕರರು ಇದ್ದಾರೆ. ಮೇ 29ರ ವೇಳೆಗೆ ಅವರಲ್ಲಿ 34,412 ನೌಕರರು ‘ಕರ್ತವ್ಯ’ ಆ್ಯಪ್ನಲ್ಲಿ ನೋಂದಣಿಯಾಗಿದ್ದು, 3,367 ನೌಕರರ ನೋಂದಣಿ ಆಗಬೇಕಿದೆ. ವಿಭಾಗದಲ್ಲಿನ ಒಟ್ಟಾರೆ ನೋಂದಣಿಯ ಪ್ರಮಾಣವು ಶೇ 91.09ರಷ್ಟು ಪ್ರಗತಿ ಕಂಡಿದೆ.

ವರ್ಗಾವಣೆ, ಎರಡ್ಮೂರು ಶಾಲೆಗಳಿಗೆ ನಿಯೋಜನೆ, ಎಚ್ಆರ್ಎಂಎಸ್ ಜೋಡಣೆಯಲ್ಲಿನ ಅಡ್ಡಿ, ಹೊಂದಾಣಿಕೆಯಾಗದ ಹೆಸರು ಗಳು, ಹುದ್ದೆಗಳ ಬಡ್ತಿಯಂತಹ ಕಾರಣಗಳಿಂದಾಗಿ 100 ಪರ್ಸೆಂಟ್ ನೋಂದಣಿಗೆ ಹಿನ್ನೆಡೆಯಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು.

ನೋಂದಣಿಯಾಗದ 3,367 ನೌಕರರ ಪೈಕಿ ಅತಿಹೆಚ್ಚು ಮಂದಿ ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯವರಿದ್ದಾರೆ. ಕಲಬುರ ಗಿಯಲ್ಲಿ 1,144 ನೌಕರರು ಹಾಗೂ ರಾಯಚೂರಿನಲ್ಲಿ 766 ಮಂದಿ ನೋಂದಣಿ ಆಗಬೇಕಿದೆ.

ಬೀದರ್ನಲ್ಲಿ 551, ಕೊಪ್ಪಳದಲ್ಲಿ 337, ಯಾದಗಿರಿಯಲ್ಲಿ 245, ಬಳ್ಳಾರಿಯಲ್ಲಿ 195 ಹಾಗೂ 129 ನೌಕರರ ನೋಂದಣಿ ಬಾಕಿ ಉಳಿದುಕೊಂಡಿದೆ ಎನ್ನುತ್ತವೆ ಕಲಬುರಗಿ ವಿಭಾಗದ ಅಂಕಿ–ಅಂಶಗಳು.

‘ಕರ್ತವ್ಯ’ ಆ್ಯಪ್ ಪ್ರಾಯೋಗಿಕ ಹಂತದಲ್ಲಿದೆ. ಶಿಕ್ಷಕರು, ಬೋಧಕೇತರ ನೌಕರರು ಬೆಳಿಗ್ಗೆ 9.45ಕ್ಕೆ ಬಂದು ಲಾಗ್ಇನ್ ಆಗಿ ಮುಖಚರ್ಯೆ ಹಾಜರಾತಿ ಹಾಕಬೇಕು. ಸಂಜೆ 4.30ಕ್ಕೆ ಲಾಗ್ಔಟ್ನ ಹಾಜರಾತಿಯೊಂದಿಗೆ ದಿನದ ಕರ್ತವ್ಯ ಮುಗಿಸಬೇಕಿದೆ. ಮೊದಲ ದಿನ ಕೆಲವೆಡೆ ನೆಟ್ವರ್ಕ್ ಸಮಸ್ಯೆ ಕಂಡುಬಂದಿದೆ’ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಅಳ್ಳಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘15 ದಿನಗಳಲ್ಲಿ ಇತ್ಯರ್ಥ’

‘ಶಿಕ್ಷಕರು ನಿಯೋಜಿತ ಶಾಲೆಗೆ ಹೋದರೆ ಮಾತ್ರವೇ ‘ಕರ್ತವ್ಯ’ ಆ್ಯಪ್ನಲ್ಲಿ ಹಾಜರಾತಿ ದಾಖಲಾಗುತ್ತದೆ. ಅಕ್ಷಾಂಶ ಮತ್ತು ರೇಖಾಂಶ ತಪ್ಪಾಗಿ ಹಾಕಿದ್ದು, ಎಚ್ಆರ್ಎಂಎಸ್ ಹಾಗೂ ಆಧಾರ್ ಕಾರ್ಡ್ನಲ್ಲಿ ಹೆಸರುಗಳ ವ್ಯತ್ಯಾಸದಿಂದಾಗಿ ಪೂರ್ಣಪ್ರಮಾಣದಲ್ಲಿ ನೋಂದಣಿ ಯಾಗಿಲ್ಲ. ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದ್ದು, ಎರಡು ವಾರಗಳಲ್ಲಿ ಕಂಡುಬರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಕಲಬುರಗಿ ವಿಭಾಗೀಯ ಕಚೇರಿಗೆ ಕಳುಹಿಸುತ್ತೇವೆ. ಅಲ್ಲಿಂದ ಆ್ಯಪ್ ನಿರ್ವಹಣೆ ಮಾಡುವ ಬೆಂಗಳೂರಿನ ತಂಡಕ್ಕೆ ರವಾನೆಯಾಗಲಿದೆ. ಎದುರಾಗುವ ಎಲ್ಲ ಸಮಸ್ಯೆಗಳನ್ನು 15 ದಿನಗಳಲ್ಲಿ ಇತ್ಯರ್ಥ ಮಾಡುವರು’ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.