ಕೆಂಭಾವಿ: ಪಟ್ಟಣದ ನಾರಾಯಣಪೂರ ಮುಖ್ಯ ಕಾಲುವೆಯ ಮೇಲಿರುವ ಸೇತುವೆ ದುರಸ್ತಿಗೆ ಅಂತೂ ಕಾಲ ಕೂಡಿ ಬಂದಿದ್ದು ಬುಧವಾರ ಲೋಕೋಪಯೋಗಿ ಇಲಾಖೆ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸುರಪುರ-ಹುನಗುಂದ ರಾಜ್ಯ ಹೆದ್ದಾರಿಯ ಸೇತುವೆ ಅನೇಕ ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಸುಗಮ ಸಂಚಾರಕ್ಕೆ ಸಂಚಕಾರವಾಗಿತ್ತು. ನಿತ್ಯ ನೂರಾರು ವಾಹನಗಳು ಜೀವ ಕೈಯ್ಯಲ್ಲಿ ಹಿಡಿದು ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಪ್ರಜಾವಾಣಿ ವರದಿ ಪ್ರಕಟಿಸಿತ್ತು.

ಮಳೆಗಾಲದಲ್ಲಿ ರಸ್ತೆ ಕೆರೆಯಂತಾಗಿ ಸಂಚಾರ ಸ್ಥಗಿತವಾಗುತ್ತಿತ್ತು. ಈ ಬಗ್ಗೆ ಹಲವಾರು ಬಾರಿ ಸ್ಥಳೀಯರು ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ.

ಶಾಶ್ವತ ದುರಸ್ತಿಗೆ ಒತ್ತಾಯ: ಬುಧವಾರ ಪ್ರಾರಂಭವಾದ ಸೇತುವೆ ದುರಸ್ತಿ ಕಾರ್ಯ ಕೇವಲ ಕಂಕರ ಹಾಕಿ ಟ್ರಾಕ್ಟರ್ ಮೂಲಕ ರಸ್ತೆ ಸರಿಪಡಿಸಿದರೆ ಸಾಲದು. ಮಳೆಗಾಲದಲ್ಲಿ ದುರಸ್ತಿ ತಾತ್ಕಾಲಿಕವಾದರೆ ಮಳೆ ನೀರಿನಿಂದ ಮತ್ತೆ ಹದಗೆಡುತ್ತದೆ ಎಂದು ವಾಹನ ಸವಾರರು ಅಸಮಾಧಾನ ಹೊರಹಾಕಿದರು.

ಇಲಾಖೆ ಸೇತುವೆಯನ್ನು ಅಚ್ಚುಕ್ಟಾಗಿ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು. ಅಪಘಾತಗಖು ಸಂಭವಿಸದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-30-131286558

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.