ಕೆಂಭಾವಿ: ಇಲ್ಲಿನ ಪುರಸಭೆಯಲ್ಲಿ ಗುರುವಾರ ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊಲೀಸ್ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ 2026-27ನೇ ಸಾಲಿನ ಬಜೆಟ್ ಸಭೆಯಲ್ಲಿ ₹1.53 ಕೋಟಿ ಅಂದಾಜು ಆಯವ್ಯಯ ಮಂಡಿಸಲಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಪಟ್ಟಣದ ಸ್ವಚ್ಛತೆ ಮತ್ತು ನೈರ್ಮಲ್ಯ ಬಗ್ಗೆ ಎಲ್ಲ ಸದಸ್ಯರು ಧ್ವನಿ ಎತ್ತಿದರು.

ಸದಸ್ಯ ರವಿ ಸೊನ್ನದ ಮಾತನಾಡಿ,‘ಪಟ್ಟಣದಲ್ಲಿ ಕಳೆದ ಹಲವು ತಿಂಗಳಿನಿಂದ ಸ್ವಚ್ಛತೆ ಎಂಬುದು ಮಾಯವಾಗಿದೆ. ಮುಖ್ಯ ರಸ್ತೆಗಳಲ್ಲಿ ಕಸ, ಚರಂಡಿ ನೀರು ಹರಿಯುತ್ತಿದ್ದು, ಈ ಬಗ್ಗೆ ಆಡಳಿತ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯರಾದ ಶಿವಶಂಕರ ಖಾನಾಪೂರ, ಆರೀಫ್ ಹುಸೇನ ಖಾಜಿ ಧ್ವನಿಗೂಡಿಸಿ, 23 ವಾರ್ಡ್ಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಮಲೀನಗೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಮುಖ್ಯಾಧಿಕಾರಿ ಪ್ರಕಾಶ ಬಾಗಲಿ ಉತ್ತರಿಸಿ,‘ನಮ್ಮಲ್ಲಿ ಈಗ ಕೆಲವು ಸ್ವಚ್ಛತಾ ಸಿಬ್ಬಂದಿ ತರಬೇತಿಗೆ ತೆರಳಿದ್ದು ಬರುವ ಏ.1ರಿಂದ ಈ ಬಗ್ಗೆ ವಿಶೇಷ ತಂಡ ರಚನೆ ಮಾಡಿ ಎಲ್ಲ 23 ವಾರ್ಡ್ಗಳಲ್ಲಿ ಸ್ವಚ್ಛತೆ ಬಗ್ಗೆ ಗಮನ ಹರಿಸುವುದಾಗಿ ಸಮಜಾಯಿಸಿ ನೀಡಿದರು.

ಸದಸ್ಯ ಶ್ರೀಧರ ದೇಶಪಾಂಡೆ,‘ಕಳೆದ ಬಾರಿ ಕರ ವಸೂಲಾತಿಯಲ್ಲಿ ಪುರಸಭೆ ಹಿಂದೆ ಬಿದ್ದಿದ್ದು, ಇದು ಹೀಗೆ ಮುಂದುವರಿದರೆ ಸರ್ಕಾರದಿಂದ ಬರುವ ಅನುದಾನ ಕಡಿತವಾಗುವ ಸಂಭವವಿದೆ’ ಎಂದರು.

ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಮುಖ್ಯಾಧಿಕಾರಿ ಪ್ರಕಾಶ ಬಾಗಲಿ, ಏ.1 ರಿಂದ ಕರವಸೂಲಿಯಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದ್ದು, ಪುರಸಭೆಯ ಪ್ರತಿಯೊಬ್ಬ ಸಿಬ್ಬಂದಿಗೆ ಇದರ ಜವಾಬ್ದಾರಿ ನೀಡಿ ಮನೆಮನೆಗೆ ತೆರಳಿ ವಿವಿಧ ಕರ ವಸೂಲಿ ಮಾಡಲಾಗುವುದು’ ಎಂದರು.

ಶರಣಪ್ಪ ಯಾಳಗಿ, ದೇವೇಂದ್ರಪ್ಪ ಟಣಕೆದಾರ ಸಭೆಯಲ್ಲಿ ಮಾತನಾಡಿದರು.

ಒಟ್ಟಾರೆ ಅಧಿಕಾರಿಗಳ ಮತ್ತು ಸದಸ್ಯರ ಟೀಕೆ ಟಿಪ್ಪಣಿಗಳ ಮಧ್ಯೆ ಬಜೆಟ್ ಸಭೆ ಮುಕ್ತಾಯವಾಯಿತು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಪರಶುರಾಮ, ಸುರೇಂದ್ರ, ಕಾಶಿನಾಥ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-30-855533196

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.