ಕೆಂಭಾವಿ: ಪಟ್ಟಣದ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಮಲ್ಲಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಮಹಾರಥೋತ್ಸ ಸಡಗರ ಸಂಭ್ರಮದಿಂದ ಜರುಗಿತು.

ಸಂಜೆ ಶೃಂಗಾರಗೊಂಡಿದ್ದ ರಥಗಳಲ್ಲಿ ರಜತ ಖಚಿತ ಹೇಮರಡ್ಡಿ ಮಲ್ಲಮ್ಮಳ ಮೂರ್ತಿಯನ್ನಿಟ್ಟು ಮೇಲೆ ಶಿಖರ ಏರುತ್ತಿದ್ದಂತೆ ಭಕ್ತರು ಹೇಮರಡ್ಡಿ ಮಲ್ಲಮ್ಮ ಮಾತಾಕಿ ಜೈ ಎಂಬ ಜಯಕಾರ ಮುಗಿಲು ಮುಟ್ಟಿತು. ಬೃಹತ್ ರಥವನ್ನು ಸಾವಿರಾರು ಹೆಣ್ಣು ಮಕ್ಕಳು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.

ಮಕ್ಕಳು, ವೃದ್ಧರು, ಮಹಿಳೆಯರು ಹೊಸ ಬಟ್ಟೆಗಳನ್ನುಟ್ಟು ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದಲೆ ಜಮಾವಣೆಗೊಂಡು ನಂತರ ನಡೆದ ರಥೋತ್ಸವವನ್ನು ಕಣ್ತುಂಬಿಕೊಂಡರು. ರಥೋತ್ಸವದ ನಂತರ ಭಕ್ತರು ಸರದಿಯಲ್ಲಿ ನಿಂತು ತಾಯಿಯ ದರ್ಶನ ಪಡೆದರು, ತೇರಿಗೆ ಹಿಡಿಗಾಯಿಗಳನ್ನು ಒಡೆದು ಹರಕೆ ತೀರಿಸಿದರು.

ಶಹಾಪುರ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿಯಿಂದ ಪುರಾಣ ಮಂಗಳ ನಡೆಯಿತು, ಧರ್ಮಸಭೆ, ಅನ್ನ ದಾಸೋಹ ಕಾರ್ಯಕ್ರಮ ಜರುಗಿದವು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿ ತಾಯಿಯ ಆಶೀರ್ವಾದ ಪಡೆದರು.

ಮಾಗಣಗೇರಿ ವಿಶ್ವಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು, ಏಕಾಕ್ಷಿ ಶಿವಾಚಾರ್ಯರು, ಹಿರೇಮಠದ ಚನ್ನಬಸವ ಶಿವಾಚಾರ್ಯರು, ಸೂಗುರೇಶ್ವರ ಶಿವಾಚಾರ್ಯರು ನಗನೂರ, ಚಿಕಮಠದ ಚನ್ನಯ್ಯ ಸ್ವಾಮೀಜಿ, ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಬಿರಾದಾರ ನಿರಲಗಿ, ಶರಣಬಸ್ಸು ಕಾಕಾ ಡಿಗ್ಗಾವಿ, ಅಮ್ಮಣ್ಣ ಧರಿ, ವೈ.ಟಿ ಪಾಟೀಲ, ಬಾಬುಗೌಡ ಯಡಿಯಾಪುರ, ಪ್ರವೀಣ ಪಾಟೀಲ, ರಾಮನಗೌಡ ಯಾಳಗಿ, ಅಯ್ಯಣ್ಣ ಲಕ್ಕುಂಡಿ, ಸಂಗನಗೌಡ ಮರಡ್ಡಿ, ಹಣಮಂತರಡಡ್ಡಿ ಮರಡ್ಡಿ, ಮಲ್ಲರೆಡ್ಡಿ ಮಲ್ಲಾಬಾದಿ, ಸಿದ್ದಗೌಡ ಶಿವಪುರ, ಶಂಕರಗೌಡ ಶಿವನಂದಿ, ಮಹಿಪಾಲರಡ್ಡಿ ಡಿಗ್ಗಾವಿ, ಶಿವರಾಜ ಬುದೂರ, ರಾಜಶೇಖರ ಯಡಿಯಾಪುರ, ಹಳ್ಳೆಪ್ಪಗೌಡ ಪರಸನಹಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-30-1365289974

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.