ಕೆಂಭಾವಿ: ‘ಸನಾತನ ಹಿಂದೂ ಧರ್ಮದ ರಕ್ಷಣೆಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಸಂಸ್ಕೃತಿ, ಸಂಪ್ರದಾಯ, ಗುರುಗಳ-ಭಗವಂತನ ಮೇಲೆ ಸದಾ ಭಕ್ತಿಯನ್ನು ನಿರಂತರ ಮಾಡಬೇಕು’ ಎಂದು ಮಣ್ಣೂರ ವೇದೇಶ ಸಂಸ್ಕೃತ ವಿದ್ಯಾಪೀಠದ ಉಪಕುಲಪತಿ ಸರ್ವೇಶಾಚಾರ್ಯ ಅಕಮಂಚಿ ಹೇಳಿದರು.

ಕೂಡಲಿ ರಘುವಿಜಯತೀರ್ಥ ಶ್ರೀಗಳ ಸಾನ್ನಿಧ್ಯದಲ್ಲಿ ಅಧಿಕ ಮಾಸದ ಅಂಗವಾಗಿ ಪಟ್ಟಣದ ಉತ್ತರಾದಿ ಮಠದಲ್ಲಿ ಹಮ್ಮಿಕೊಂಡ ಏಳು ದಿನಗಳ ಧಾರ್ಮಿಕ ಶಿಬಿರದ ನೇತೃತ್ವ ವಹಿಸಿ ಸೋಮವಾರ ಅವರು ಮಾತನಾಡಿದರು.

‘ಧರ್ಮ ಜಾಗೃತಿ, ದೇಶ ಭಕ್ತಿ, ಸನಾತನ ಹಿಂದೂ ಧರ್ಮದ ರಕ್ಷಣೆಯ ಮನೋಭಾವ ಪ್ರತಿಯೊಬ್ಬರಲ್ಲಿ ಬರಬೇಕಾದರೆ ಮೊದಲು ನಮ್ಮ ಧರ್ಮದ ಆಚರಣೆಗಳನ್ನು ನಾವು ಚಾಚೂ ತಪ್ಪದೆ ಪಾಲಿಸಬೇಕು. ದೇಶದ ಮತ್ತು ದೇಶದ ಜನತೆಯ ರಕ್ಷಣೆಗೆ ಗಡಿಯಲ್ಲಿ ಕಾಯಲು ನಮ್ಮ ಸೈನಿಕರು ಹಗಲಿರುಳು ಶ್ರಮ ವಹಿಸಿದಂತೆ ನಮ್ಮ ಧರ್ಮವನ್ನು ರಕ್ಷಣೆ ಮಾಡಲು ನಮ್ಮ ಸಂಸ್ಕೃತಿಯನ್ನು ಮೇಲೆತ್ತರಕ್ಕೆ ಒಯ್ಯಲು ನಾವೂ ಹಗಲಿರುಳು ಕಂಕಣಬದ್ಧರಾಗಿ ನಿಲ್ಲಬೇಕು’ ಎಂದು ಹೇಳಿದರು.

‘ಈಗ ಅಧಿಕ ಮಾಸದ ಸಂಭ್ರಮ. ಅಧಿಕಸ್ಯ ಅಧಿಕಂ ಫಲಂ ಎಂಬಂತೆ ಈ ಮಾಸದಲ್ಲಿ ನಾವು ಮಾಡುವ ಪ್ರತೊಯೊಂದು ಉತ್ತಮ ಕಾರ್ಯಗಳು ಭಗವಂತನಿಗೆ ಅರ್ಪಿತವಾಗುತ್ತವೆ. ಈ ಮಾಸದಲ್ಲಿ ವಿಶೇಷವಾಗಿ ದಾನ, ಜಪ, ಅನುಷ್ಠಾನ, ಭಾಗವತ ಶ್ರವಣ, ಗುರುಗಳ ಸೇವೆ, ಭಗವಂತನ ಚಿಂತನ ಮಾಡಬೇಕು. ಶ್ರೀಗಳ ಆಜ್ಞೆ ಹಾಗೂ ಅವರ ಆಶೀರ್ವಾದದಿಂದ ಇಲ್ಲಿ ಧಾರ್ಮಿಕ ಶಿಬಿರ ಏರ್ಪಡಿಸಿದ್ದು ಇದರ ಲಾಭ ಪಡೆದು ಎಲ್ಲರೂ ಸನಾತನ ಸಂಸ್ಕೃತಿ ರಕ್ಷಣೆಗೆ ಮುಂದಾಗಬೇಕು’ ಎಂದು ಕರೆ ನೀಡಿದರು.

ನಂತರ ರಘುವಿಜಯತೀರ್ಥರಿಂದ ಸತ್ಯನಾರಾಯಣ ದೇವರಿಗೆ, ಸುಮಧ್ವ ಮಾರುತಿ ಮತ್ತು ಯತಿಚತುಷ್ಠಯ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಸಂಸ್ಥಾನ ಪೂಜೆ, ಸಂಜೆ ಆಶೀರ್ವಚನ ಜರುಗಿತು.

ಈ ಸಂದರ್ಭದಲ್ಲಿ ಜಯಸತ್ಯಪ್ರಮೋದ ಸೇವಾ ಸಂಘದ ಪದಾಧಿಕಾರಿಗಳು, ಸತ್ಯಪ್ರಮೋದ ಯುವ ಸೇನೆ, ಪ್ರಮೋದಿನ ಮಹಿಳಾ ಭಜನಾ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಹಲವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-30-1590395755

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.