ಕೆಂಭಾವಿ: ಅಲ್ಪ ನೀರನ್ನು ನಂಬಿ ಪಟ್ಟಣ ಸೇರಿದಂತೆ ವಲಯದ ಹಲವು ಭಾಗಗಳಲ್ಲಿ ಬೆಳೆದ ಮೆಕ್ಕೆಜೋಳಕ್ಕೆ ಸರಿಯಾದ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರದ ಬೆಂಬಲ ಬೆಲೆಗೆ ಮಾರಾಟ ಮಾಡಲು ಪಹಣಿಯಲ್ಲಿ ಬೆಳೆ ಹೆಸರು ನಮೂದಾಗಿಲ್ಲ. ಬೆಳೆ ಸರ್ವೆ ವಿಳಂಬ ಇದಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.

ಪಟ್ಟಣ ಸೇರಿ ವಲಯದ ಯಾಳಗಿ, ನಗನೂರ, ಎಂ.ಬೊಮ್ಮನಹಳ್ಳಿ ಸೇರಿದಂತೆ ಹಲವು ಭಾಗದ ರೈತರು ಬೇಸಿಗೆ ಬೆಳೆಯಾಗಿ ಮೆಕ್ಕೆ ಜೋಳವನ್ನು ಬೆಳೆದಿದ್ದಾರೆ. ಸರ್ಕಾರ ಕ್ವಿಂಟಲ್ಗೆ ₹2,400 ಬೆಂಬಲ ಬೆಲೆ ನಿಗದಿಪಡಿಸಿದೆ. ಈ ಬೆಲೆಗೆ ಮಾರಾಟ ಮಾಡಲು ಹಲವು ತಾಂತ್ರಿಕ ತೊಂದರೆ ಎದುರಾಗಿವೆ. ಇದರಿಂದ ರೈತರು ಅನಿವಾರ್ಯವಾಗಿ ಖಾಸಗಿಯವರಿಗೆ ₹1,650ರಿಂದ 1,750ಕ್ಕೆ ಮಾರಾಟ ಮಾಡುತ್ತಿದ್ದಾರೆ.

‘ಕಳೆದೆರಡು ತಿಂಗಳ ಹಿಂದೆ ಬೆಂಬಲ ಬೆಲೆಯಲ್ಲಿ ಪಟ್ಟಣದ ಪಿಕೆಪಿಎಸ್ ಬ್ಯಾಂಕ್ ಒಂದು ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಮುಂದಾಗಿತ್ತು. ಆದರೆ, ಕಂದಾಯ ಇಲಾಖೆಯ ದಾಖಲಾತಿ ಪ್ರಕಾರ ರೈತರ ಪಹಣಿಯಲ್ಲಿ ಎರಡನೇ ಅವಧಿಯ ಬೆಳೆ ಮೆಕ್ಕೆಜೋಳ ಎಂದು ನಮೂದಾಗಿಲ್ಲ. ಇದರಿಂದ ರೈತರ ಬೆಳೆ ದಾಖಲಾತಿ ಮಾಡದೆ ಖರೀದಿ ಕೇಂದ್ರ ಬಂದ್ ಮಾಡಲಾಯಿತು. ಕಂದಾಯ ಇಲಾಖೆ ಬೇಜವಾಬ್ದಾರಿಯಿಂದ ಮೆಕ್ಕೆಜೋಳ ಬೆಳೆದ ರೈತರು ಬೆಂಬಲ ಬೆಲೆ ಸಿಗದೆ ಅನಿವಾರ್ಯವಾಗಿ ಖಾಸಗಿಯಲ್ಲಿ ಸಿಕ್ಕಷ್ಟು ದರಕ್ಕೆ ನೀಡಬೇಕಾದಂತ ಪರಿಸ್ಥಿತಿ ಬಂದಿದೆ’ ಎನ್ನುತ್ತಾರೆ ರೈತ ವಿಜಯಾಚಾರ್ಯ.

ವಲಯದಲ್ಲಿ ಸುಮಾರು ಎರಡು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ಇನ್ನೇನು ಕೆಲವೇ ದಿನಗಳಲ್ಲಿ ರೈತರ ಕೈಸೇರಲಿದೆ. ಸರ್ಕಾರ ನೆಪಮಾತ್ರಕ್ಕೆ ಸ್ವಲ್ಪ ದಿನಗಳ ಮಟ್ಟಿಗೆ ಖರೀದಿ ಕೇಂದ್ರ ತೆರೆದು ಪಹಣಿ ನೆಪವೊಡ್ಡಿ ಖರೀದಿ ಕೇಂದ್ರಗಳನ್ನು ಬಂದ್ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಮುಂಗಾರು ಬೆಳೆಗಳಲ್ಲಿ ಹತ್ತಿ, ತೊಗರಿ ಬೆಳೆಗಳು ಮಳೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲವು ಭಾಗಗಳಲ್ಲಿ ನೀರು ನಿಂತು ಇವೆರಡೂ ಬೆಳೆಗಳು ರೈತರ ಕೈಸೇರದೆ ಕಣ್ಣೀರು ತಂದಿತ್ತು. ಈ ನಷ್ಟವನ್ನು ಭರಿಸಲು ಅಲ್ಪ ಪ್ರಮಾಣದ ನೀರಿನ ಸೌಕರ್ಯ ಹೊಂದಿದ ರೈತರು ಬೇಸಿಗೆ ಬೆಳೆಯಾಗಿ ಮೆಕ್ಕೆಜೋಳ ಬೆಳೆದಿದ್ದು ಫಸಲು ಅಧಿಕವಾಗಿದೆ. ಈಗ ಸೂಕ್ತ ಬೆಲೆ ಸಿಗದೆ ಮತ್ತೆ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ಮೆಕ್ಕೆಜೋಳ ಖರೀದಿಗೆ ಮುಂದಾಗಬೇಕು ಎಂಬುದು ರೈತರ ಆಗ್ರಹವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-30-295990267

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.