ಕೆಂಭಾವಿ: ‘ಸಮೀಪದ ಕೂಡಲಗಿ ಗ್ರಾಮದ ಶಾಂತಾನಂದ ಸರಸ್ವತಿ ಸ್ವಾಮೀಜಿ ಮಠದಲ್ಲಿ ಶಂಕರಾಚಾರ್ಯರ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶಾರದಾ ಪೀಠ ಶೃಂಗೇರಿ ವತಿಯಿಂದ ಬಾಲ ಭಾರತಿ ಶೃಂಗೇರಿ ಅವರು ಆಯೋಜಿಸುತ್ತಿರುವ ಸಂಸ್ಕಾರ ಸುಧಾ ವತಿಯಿಂದ ಮೇ 1 ರಿಂದ 14 ರ ವರೆಗೆ 14 ದಿನಗಳ ಬೇಸಿಗೆ ಸಂಸ್ಕಾರ ಸುಧಾ ಶಿಬಿರ ಏರ್ಪಡಿಸಲಾಗಿದೆ’ ಎಂದು ಮಠದ ಪೀಠಾಧಿಪತಿ ಉಮಾಕಾಂತ ಸಿದ್ದರಾಜ್ ಮಹಾರಾಜ್ ತಿಳಿಸಿದ್ದಾರೆ.

‘ಈ ಶಿಬಿರದ ಮೂಲಕ ಮಕ್ಕಳು ಭವಿಷ್ಯದಲ್ಲಿ ಜ್ಞಾನ ಮತ್ತು ಸಂಸ್ಕಾರದ ಸಮತೋಲನ ಹೊಂದಿದ ವ್ಯಕ್ತಿಗಳಾಗಿ ರೂಪಗೊಳ್ಳಬೇಕೆಂಬ ಉದ್ದೇಶದಿಂದ ಆಯೋಜಿಸಲಾಗಿದೆ. ಶಿಬಿರದಲ್ಲಿ ಮಕ್ಕಳಲ್ಲಿ ಆಧುನಿಕತೆಯ ಜೊತೆಗೆ ಧಾರ್ಮಿಕ ಮೌಲ್ಯಗಳು, ನೈತಿಕತೆ ಹಾಗೂ ಸಂಸ್ಕಾರ, ನಮ್ಮ ಇತಿಹಾಸದ ಪರಿಚಯ, ಧರ್ಮ ಮತ್ತು ಸಂಸ್ಕೃತಿಗೆ ಪರಿಚಯ, ಸಂಸ್ಕೃತ ಭಾಷೆಯ ಮೂಲಭೂತ ಪಾಠಗಳು, ಆಟಗಳು ಮತ್ತು ವ್ಯಕ್ತಿತ್ವ ಅಭಿವೃದ್ಧಿ ಚಟುವಟಿಕೆಗಳ ತಿಳುವಳಿಕೆ ನೀಡಲಾಗುವುದು’ ಎಂದಿದ್ದಾರೆ.

ವಿಶ್ವಂಬರ ಜೋಶಿ ಅವರ ನೇತೃತ್ವದಲ್ಲಿ ಶಿಬಿರವನ್ನು ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಿ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-30-940609666

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.