ಕೆಂಭಾವಿ: ಪಟ್ಟಣದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಬಿರುಗಾಳಿ ಮಳೆ ದೊಡ್ಡ ಅವಾಂತರ ಸೃಷ್ಟಿಸಿದ್ದು ಗಾಳಿ ರಭಸಕ್ಕೆ ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪವೊಂದು ಸಂಪೂರ್ಣ ನೆಲಕಚ್ಚಿದ ಘಟನೆ ನಡೆದಿದೆ.

ಸಂಜೆ 5 ಗಂಟೆ ಸುಮಾರಿಗೆ ಭಾರಿ ಗಾಳಿಯೊಂದಿಗೆ ಪ್ರಾರಂಭವಾದ ಆಲಿಕಲ್ಲ ಮಳೆ ಹಲವು ಅವಾಂತರಗಳಿಗೆ ಕಾರಣವಾಗಿದ್ದು ಕೆಂಭಾವಿ-ಮಲ್ಲಾ ರಸ್ತೆಯ ಎಸ್.ಬಿ.ಎಚ್ ಪ್ಯಾಲೇಸ್ ಶಾದಿ ಮಹಲ್ ಪತ್ರಾಸುಗಳು ದೊಡ್ಡ ಕಬ್ಬಿಣದ ಆ್ಯಂಗಲ್ ಸಮೇತ ಹಾರಿಹೋಗಿದ್ದು ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ.

ಮುಖ್ಯ ರಸ್ತೆಗ ಹೊಂದಿಕೊಂಡಿರುವ ಈ ಕಲ್ಯಾಣ ಮಂಟಪದಲ್ಲಿ ಮುಸ್ಲೀಂ ಸಮಾಜದವರ ಮದುವೆ ನಡೆಯುತ್ತಿತ್ತು. ಏಕಾಏಕಿ ಪ್ರಾರಂಭವಾದ ಗಾಳಿ ಕ್ಷಣಾರ್ಧದಲ್ಲಿ ಇಡೀ ಕಲ್ಯಾಣ ಮಂಟಪವನ್ನು ನೆಲಸಮ ಮಾಡಿದ್ದು ಮದುಮಕ್ಕಳ ವೇದಿಕೆ, ಊಟದ ಹಾಲ್, ಪಾರ್ಕಿಂಗ್, ಅಡುಗೆ ಕೋಣೆ ಸೇರಿದಂತೆ ಇಡೀ ಕಲ್ಯಾಣ ಮಂಟಪ ಗಾಳಿಗೆ ಹಾರಿ ಹೋಗಿ ದೂರದ ಆಶ್ರಯ ಕಾಲೊನಿಯ ಸರ್ಕಾರಿ ಶಾಲೆ ಮತ್ತು ಮನೆಗಳಿಗೆ ನುಗ್ಗಿದ್ದು ಮುರಿದ ಪತ್ರಾಗಳು ಮತ್ತು ಕಬ್ಬಿಣದ ಆ್ಯಂಗಲ್ಗಳು ಗಾಳಿಯ ಭೀಕರತೆಯನ್ನು ತೋರಿಸುತ್ತಿತ್ತು.

ಮದುವೆ ಮನೆಯಲ್ಲಿ ಮೌನ: ಪಟ್ಟಣದ ನಾಡಗೌಡ ಮನೆತನದ ಮದುವೆ ಸಂಭ್ರಮ ಈ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದು ಇನ್ನೇನು ಕೆಲವೆ ಗಳಿಗೆಯಲ್ಲಿ ಮದುವೆ ಶಾಸ್ತ್ರ ಮುಗಿದು ಜನತೆ ತಮ್ಮ ಮನೆಗಳಿಗೆ ತೆರಳು ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದ್ದು ಈಗ ಮದುವೆ ಮನೆಯಲ್ಲಿ ಸಂಪೂರ್ಣ ಮೌನ ಆವರಿಸಿದೆ. ಅಲ್ಲಿದ್ದ ಕೆಲವು ಜನರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸದೆ ಎಲ್ಲರೂ ನಿಟ್ಟುಸಿರು ಬಿಟ್ಟಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ರಾಜ್ಯ ಹೆದ್ದಾರಿ ಬಂದ್: ಭಾರಿ ಗಾಳಿಯಿಂದ ಸುರಪುರ-ಹುನಗುಂದ ರಸ್ತೆಯ ಸಂಜೀವನಗರ ಬಡಾವಣೆಯಲ್ಲಿ ಭಾರಿ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು ಇದರಿಂದ ಒಂದು ಭಾಗದ ರಸ್ತೆ ಸಂಪೂರ್ಣ ಬಂದ್ ಆಗಿದೆ. ಏಕಾಕಿ ಸಂಭವಿಸಿದ ಈ ಭಾರಿ ಬಿರುಗಾಳಿ ಮಳೆಗೆ ಹಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ನೆಲಕಚ್ಚಿದ್ದು ವೈರ್ಗಳು ತುಂಡಾಗಿ ಬಿದ್ದಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-30-281486476

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.