ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರ ಎಚ್ಚರಿಸಲು ಕಿಸಾನ್ ಸಂಘ ಬಲಪಡಿಸಿ’

ಕರ್ನಾಟಕ ಪ್ರಾಂತ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಗೌಡ ಸಲಹೆ
Last Updated 6 ಫೆಬ್ರುವರಿ 2019, 14:12 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಆರು ತಾಲ್ಲೂಗಳಲ್ಲಿ ಭಾರತೀಯ ಕಿಸಾನ್‌ ಸಂಘವನ್ನು ಬಲಪಡಿಸಲು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಮಿತಿಗಳನ್ನು ಪುನರ್‌ ರಚಿಸಲು ಬುಧವಾರ ನಡೆದ ಕರ್ನಾಟಕ ಪ್ರಾಂತದ ಭಾರತೀಯ ಕಿಸಾನ್ ಸಂಘದ ಸಭೆಯಲ್ಲಿ ನಿರ್ಣಯಿಸಲಾಯಿತು.

ಕರ್ನಾಟಕ ಪ್ರಾಂತ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಗೌಡ ರಾಮನಗರ ಮಾತನಾಡಿ,‘ಜನರ ಮತ್ತು ರೈತರ ಪರಿಸ್ಥಿತಿ ಹದಗೆಟ್ಟಿದೆ. ಆಳುವ ಸರ್ಕಾರ ಮತ್ತು ಅಧಿಕಾರಿ ವರ್ಗವನ್ನು ಎಚ್ಚರಿಸುವ ನಿಟ್ಟಿನಲ್ಲಿ ಕಿಸಾನ್ ಸಂಘ ಹೋರಾಟ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸಂಘವನ್ನು ಬಲಪಡಿಸಲು ಯುವಕರು ಮುಂದಾಗಬೇಕು’ ಎಂದು ಕರೆ ನೀಡಿದರು.

‘ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಉದ್ಭವಿಸಿದೆ. ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದರಾಗಿದೆ. ಅದಕ್ಕಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಹಾಗೂ ಮೇವು ಬ್ಯಾಂಕ್‌ ಸ್ಥಾಪಿಸಿ ರೈತರಿಗೆ ವಿತರಣೆ ಮಾಡಲು ಜಿಲ್ಲಾಡಳಿತವನ್ನು ಎಚ್ಚರಿಸುವ ಕೆಲಸ ಆಗಬೇಕಿದೆ’ ಎಂದರು.

ಉತ್ತರ ಕರ್ನಾಟಕದ ಅಧ್ಯಕ್ಷ ಗುರುನಾಥ ಬುಗರಿ ಮಾತನಾಡಿ,‘ಫಸಲ್‌ ವಿಮಾ ಯೋಜನೆಗಳಿಗೆ ಅಡ್ಡಿ ಇರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರ ಕ್ರಮ ಜರುಗಿಸಬೇಕು. ಸರ್ಕಾರ ಮನ್ನಾ ಮಾಡಿದ ಸಾಲ ಯೋಜನೆ ರೈತರೆಲ್ಲರಿಗೂ ತಲುಪುವಂತಾಗಬೇಕು. ಅದಕ್ಕಾಗಿ ಕಿಸಾನ್‌ ಸಂಘದ ಕಾರ್ಯಕರ್ತರು ರೈತರಲ್ಲಿ ಜಾಗೃತಿಗೆ ಮೂಡಿಸಬೇಕಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿರುವ ಕೆರೆಗಳಲ್ಲಿನ ಹೂಳು ತೆಗೆಯುವ ಕಾರ್ಯ ನನೆಗದಿಗೆ ಬಿದ್ದಿದೆ. ಜೈನ್ ಸಂಘಟನೆಗೆ ಕೆರೆ ಹೂಳೆತ್ತುವ ಕುರಿತು ಒಪ್ಪಂದ ಮಾಡಿಕೊಳ್ಳುವುದರಲ್ಲೇ ಜಿಲ್ಲಾಡಳಿತ ಕಾಲಹರಣ ಮಾಡುತ್ತಿದೆ. ಬೇಸಿಗೆ ಹಂಗಾಮಿನಲ್ಲಿ ಹೂಳೆತ್ತುವ ಕಾಮಗಾರಿಗಳು ಮುಗಿದರೆ ಮುಂದಿನ ಮಳೆಗಾಲದಲ್ಲಿ ಕೆರೆಗಳಲ್ಲಿ ನೀರಿನ ಸಂಗ್ರಹ ಆಗಲಿದೆ’ ಎಂದು ಹೇಳಿದರು.

ಹುಣಸಗಿ ತಾಲ್ಲೂಕು ಅಧ್ಯಕ್ಷ ರುದ್ರಗೌಡ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಮನಟಗಿ, ರಾಜ್ಯ ಕಾರ್ಯಕಾರಣಿ ಸದಸ್ಯ ಸತ್ಯನಾರಾಯಣ ಪೋಲಂಪಲ್ಲಿ, ನಿಂಗಣಗೌಡ ಗುಳಬಾಳ, ನರಸಪ್ಪ ದೇವತ್ಕಲ್, ಸೈಯದ್ ತಾಳಿಕೋಟೆ, ತಿರುಪತಿ ಕಕ್ಕೇರಿ, ಪ್ರಭು ನೀಲಗಾರ, ಬಲಭೀಮ ಕುಲಕರ್ಣಿ, ಗುರು ಅನಭಿ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT