ಗುರುವಾರ , ಆಗಸ್ಟ್ 22, 2019
26 °C
ನಾರಾಯಣಪುರ ಜಲಾಶಯದಿಂದ 2.90 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ

ಕೊಳ್ಳೂರು (ಎಂ) ಸೇತುವೆ ಮುಳುಗಡೆ, ಜಮೀನು ಜಲಾವೃತ

Published:
Updated:
Prajavani

ಯಾದಗಿರಿ: ನಾರಾಯಣಪುರ ಜಲಾಶಯದಿಂದ 2.90 ಲಕ್ಷ ಕ್ಯುಸೆಕ್ ನೀರು ಹೊರ ಬಿಟ್ಟಿರುವುದರಿಂದ ಕೊಳ್ಳೂರು (ಎಂ) ಸೇತುವೆ ಮುಳುಗಡೆಯಾಗಿದೆ.

ಇದರಿಂದ ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದ ವಾಹನಗಳು ತಿಂಥಿಣಿ ಸೇತುವೆ ಮೂಲಕ 45 ಕಿ.ಮೀ. ಹೆಚ್ಚುವರಿ ದೂರ ಕ್ರಮಿಸಬೇಕಾಗಿದೆ.

ಕೃಷ್ಣಾ ನದಿ ದಡದಲ್ಲಿರುವ ಹುಣಸಗಿ ತಾಲ್ಲೂಕಿನ ಛಾಯಾಭಗವತಿ ದೇವಸ್ಥಾನ ಭಾಗಶಃ ಮುಳುಗ‌ಡೆಯಾಗಿದೆ. ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಸಾವಿರಾರು ಎಕರೆಯಲ್ಲಿ ಭತ್ತ, ಹತ್ತಿ, ತೊಗರಿ ಬೆಳೆಗೆ ಹಾನಿಯಾಗುವ ಸಾಧ್ಯತೆ ಇದೆ. ಕೆಲವೆಡೆ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.

ಗಂಜಿ ಕೇಂದ್ರ ಸ್ಥಾಪನೆ: ಸುರಪುರ ತಾಲ್ಲೂಕಿನ ದೇವಾಪುರ, ತಿಂಥಿಣಿ, ಸುರಪುರ ಎಪಿಎಂಸಿ ಬಳಿ ಗಂಜಿ ಕೇಂದ್ರ ಸ್ಥಾಪಿಸಲಾಗಿದೆ. ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ), ಗೌಡೂರ ಹಾಗೂ ವಡಗೇರಾ ತಾಲ್ಲೂಕಿನ ಹಯ್ಯಾಳ, ವಡಗೇರಾ, ಬೆಂಡಬೆಂಬಳಿ ಗ್ರಾಮದಲ್ಲಿ ಗಂಜಿ ಕೇಂದ್ರ ಆರಂಭಿಸಲಾಗುತ್ತಿದೆ.

Post Comments (+)