ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | 156ಕ್ಕೆ ಏರಿಕೆಯಾದ ಕೋವಿಡ್‌–19

ಮೇ 20ರಂದು ಮೃತಪಟ್ಟಿದ್ದ ಮಹಿಳೆಯ ವರದಿ ಸೇರಿ 16 ಜನರಿಗೆ ಸೋಂಕು ದೃಢ
Last Updated 27 ಮೇ 2020, 15:37 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಬುಧವಾರ 16 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಮೇ 20ರಂದು ಮೃತಪಟ್ಟಿದ್ದ ಮಹಿಳೆಯ ಪಾಸಿಟಿವ್ ವರದಿ ಕೂಡ ಸೇರಿದೆ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 156ಕ್ಕೆ ಏರಿಕೆಯಾಗಿದೆ.

ಯಾದಗಿರಿ ತಾಲ್ಲೂಕಿನ ಅರಕೇರಾ ಕೆ. ಗ್ರಾಮದ 69 ವರ್ಷದ ಮಹಿಳೆ (ಪ್ರಕರಣ ಸಂಖ್ಯೆ 2301) ಮೇ 20ರಂದು ಮೃತಪಟ್ಟಿದ್ದಾರೆ. ಮಹಿಳೆಯ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದಾಗ ಪಾಸಿಟಿವ್ ಎಂದು ವರದಿ ಬಂದಿದೆ. ಇವರು ಮುಂಬೈನಿಂದ ಜಿಲ್ಲೆಗೆ ಮೇ 20ರಂದು ಆಗಮಿಸಿದ್ದರು.

ಶಹಾಪುರ ತಾಲ್ಲೂಕಿನ ಗೋಗಿ ಕೆ. ಗ್ರಾಮದ 30 ವರ್ಷದ ಪುರುಷ (ಪಿ-2292), ಗುರುಮಠಕಲ್ ತಾಲ್ಲೂಕಿನ ಚಿನ್ನಾಕಾರ ಗ್ರಾಮದ 36 ವರ್ಷದ ಮಹಿಳೆ (ಪಿ-2293), ಚಿನ್ನಾಕಾರ ಗ್ರಾಮದ 27 ವರ್ಷದ ಮಹಿಳೆ (ಪಿ-2294), ಚಿನ್ನಾಕಾರ ಗ್ರಾಮದ 6 ವರ್ಷದ ಬಾಲಕಿ (ಪಿ-2295), ಗುರುಮಠಕಲ್ ತಾಲ್ಲೂಕಿನ ಗುಂಜನೂರು ಗ್ರಾಮದ 4 ವರ್ಷದ ಬಾಲಕ (ಪಿ-2296), ಮೋಟನಳ್ಳಿ ತಾಂಡಾದ 13 ವರ್ಷದ ಬಾಲಕ (ಪಿ-2297), ಗುಂಜನೂರು ಗ್ರಾಮದ 25 ವರ್ಷದ ಮಹಿಳೆ (ಪಿ-2298), ಗುರುಮಠಕಲ್ ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದ 39 ವರ್ಷದ ಪುರುಷ (ಪಿ-2299) ಸೋಂಕಿತರಾಗಿದ್ದಾರೆ.

ಗುರುಮಠಕಲ್ ತಾಲ್ಲೂಕಿನ ಗುಂಜನೂರು ಗ್ರಾಮದ 2 ವರ್ಷದ ಬಾಲಕಿ (ಪಿ-2300), ಯಾದಗಿರಿ ತಾಲ್ಲೂಕಿನ ಮುದ್ನಾಳ ನರಸನ ತಾಂಡಾದ 3 ವರ್ಷದ ಬಾಲಕ (ಪಿ-2302), ಅರಕೇರಾ ಕೆ. ಬಸವಣ್ಣ ತಾಂಡಾದ 33 ವರ್ಷದ ಪುರುಷ (ಪಿ-2303), ಅರಕೇರಾ ಕೆ. ಬಸವಣ್ಣ ತಾಂಡಾದ 1 ವರ್ಷದ 6 ತಿಂಗಳ ಬಾಲಕಿ (ಪಿ-2304), ಅರಕೇರಾ ಕೆ. ಬಸವಣ್ಣ ತಾಂಡಾದ 7 ವರ್ಷದ ಬಾಲಕಿ (ಪಿ-2305), ಮೋಟನಳ್ಳಿ ತಾಂಡಾದ 26 ವರ್ಷದ ಮಹಿಳೆ (ಪಿ-2306), ಮೋಟನಳ್ಳಿ ತಾಂಡಾದ 50 ವರ್ಷದ ಮಹಿಳೆ (ಪಿ-2307) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಇವರೆಲ್ಲರೂ ಮಹಾರಾಷ್ಟ್ರದ ಮುಂಬೈ, ಉಮ್ರಾ, ಕೌಸ್, ನವ ಮುಂಬೈ ಘಟ್ ಗೊಪರ್ ಸ್ಥಳಗಳಿಂದ ಜಿಲ್ಲೆಗೆ ಹಿಂದಿರುಗಿದವರು. ಪ್ರಕರಣ ಸಂಖ್ಯೆ ಪಿ-2292 ವ್ಯಕ್ತಿ ಮೇ 12ರಂದು ಜಿಲ್ಲೆಗೆ ಆಗಮಿಸಿದರೆ, ಉಳಿದ 14 ಜನ ಮೇ 14ರಂದು ಆಗಮಿಸಿದ್ದರು.

ಪಿ-2292 ವ್ಯಕ್ತಿಯನ್ನು ಸುರಪುರದ ಬಾಲಕರ ಮೆಟ್ರಿಕ್ ನಂತರ ವಸತಿ ನಿಲಯ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಪಿ-2302 ಬಾಲಕನನ್ನು ಮುದ್ನಾಳ ನರಸನ ತಾಂಡಾ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಪಿ-2303, ಪಿ-2304 ಮತ್ತು ಪಿ-2305 ವ್ಯಕ್ತಿಗಳನ್ನು ಯಾದಗಿರಿ ನಗರದ ಕೋಳಿವಾಡ ಪ್ರೌಢಶಾಲೆ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಉಳಿದ 10 ಪ್ರಕರಣಗಳ ವ್ಯಕ್ತಿಗಳನ್ನು ಗುಂಜನೂರು ಮೊರಾರ್ಜಿ ದೇಸಾಯಿ ವಸತಿಶಾಲೆ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು ಎಂದು ಜಿಲ್ಲಾಡಳಿತ ತಿಳಿಸಿದೆ.

9 ಜನ ಮನೆಗೆ
ಕೋವಿಡ್‌–19 ಪೀಡಿತರ ಸಂಖ್ಯೆ ಏರಿಕೆಯಾಗುತ್ತಿರುವ ಮಧ್ಯೆ ಮಂಗಳವಾರ 9 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜಿಲ್ಲೆಯ ಜನತೆಗೆ ಕೊಂಚ ಮಟ್ಟಿಗೆ ಸಮಾಧಾನ ತಂದಿದೆ. 9 ಜನರಿಗೆಮೇ 12, 13 ಹಾಗೂ 14 ರಂದು ಕೋವಿಡ್ದೃಢವಾಗಿತ್ತು. ಇದರಿಂದ ವೈದ್ಯರು ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು.

ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌, ಜಿಪಂ ಸಿಇಒ ಶಿಲ್ಪಾ ಶರ್ಮಾ, ಡಿಎಚ್‌ಒ ಡಾ.ಎಂ.ಎಸ್‌.ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾರಾಯಣಪ್ಪ ಮತ್ತು ವೈದ್ಯ, ಸಿಬ್ಬಂದಿಬಿಡಗಡೆಯಾದವರಿಗೆ ಚಪ್ಪಾಳೆ ತಟ್ಟಿ ಮನೆಗೆ ಕಳುಹಿಸಿದರು.

ಹೂ,ಸ್ಯಾನಿಟರಿ ಕಿಟ್, ಹಣ್ಣಿನ ಕಿಟ್‌, ಬಿಡುಗಡೆ ಪತ್ರ ಕೊಟ್ಟುಮನೆಯಲ್ಲಿ 14 ದಿನ ಕ್ವಾರಂಟೈನ್‌ ಇರಿ. ಕೆಮ್ಮು, ಜ್ವರ, ನೆಗಡಿ ಬಂದರೆ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT