ಸೋಮವಾರ, ಜನವರಿ 24, 2022
23 °C

ಅಧ್ಯಯನಶೀಲರಾಗಿ: ಯುವ ವಕೀಲರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಸಮಾಜದಲ್ಲಿ ವಕೀಲರ ಜವಾಬ್ದಾರಿ ಹೆಚ್ಚಿದೆ. ವೃತ್ತಿಯು ಈಗ ಹೆಚ್ಚು ಜಟಿಲವಾಗುತ್ತಲಿದೆ. ಅಪರಾಧ ಪ್ರಕರಣಗಳು ನೂತನ ಬಗೆಯಲ್ಲಿ ನಡೆಯುತ್ತಿರುವುದರಿಂದ ಅದನ್ನು ಎದುರಿಸಲು ವಕೀಲರು ಸಿದ್ದರಾಗಬೇಕಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ತಿಳಿಸಿದರು.

ನಗರದಲ್ಲಿ ವಕೀಲರ ಸಂಘವು ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವ ವಕೀಲರು ಸದಾ ಅಧ್ಯಯನಶೀಲ ರಾಗಬೇಕು. ನ್ಯಾಯಾಲಯದ ಕಲಾಪದಲ್ಲಿ ಹಿರಿಯ ವಕೀಲರು ವಾದ ಮಂಡಿಸುತ್ತಿರುವಾಗ ಅದನ್ನು ಗಮನವಿಟ್ಟು ಕೇಳಬೇಕು. ನಿರಂತರವಾಗಿ ಪರಿಶ್ರಮ ಮಾಡುತ್ತಾ ಕೆಲಸ ಮಾಡಬೇಕು. ಕಕ್ಷಿದಾರರ ವಿಶ್ವಾಸಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಶಾಂತಗೌಡ ವಿ ಪಾಟೀಲ ಮಾತನಾಡಿ, ‘ವಕೀಲರು ಈಗ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವಂತೆ ಆಗಿದೆ. ನಿರ್ಭಿತಿಯಿಂದ ವಕೀಲರು ಕೆಲಸ ಮಾಡಬೇಕಾದರೆ ವಕೀಲರ ಕಾಯ್ದೆ ಜಾರಿಗೆ ತರುವುದು ಅಗತ್ಯವಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ನೂತನ ಅಪರಾಧ ಪ್ರಕರಣಗಳು ಅಂದರೆ ಸೈಬರ್ ಕ್ರೈಂ, ಅತ್ಯಾಚಾರ ಪ್ರಕರಣಗಳು ವಕೀಲರಿಗೆ ಸವಾಲಾಗಿ ಪರಿಣಿಮಿಸಿವೆ. ಅಧ್ಯಯನದ ಜತೆಗೆ ಹೊಸ ತಾಂತ್ರಿಕತೆ ವಿಧಾನವನ್ನು ವಕೀಲರು ಅರಿತು ಕೊಳ್ಳುವುದು ಅಗತ್ಯವಾಗಿದೆ’ ಎಂದರು.

ಸರ್ಕಾರಿ ಅಭಿಯೋಜಕ ವಿನಾಯಕ ಕೋಡ್ಲಾ, ವಕೀಲರಾದ ಶ್ರೀನಿವಾಸರಾವ್ ಕುಲಕರ್ಣಿ, ಎಸ್.ಶೇಖರ, ಎಂ.ಆರ್.ಮಾಲಿ ಪಾಟೀಲ, ಭೀಮನಗೌಡ, ನಾಜಿಯಾ ಬೇಗಂ, ಆರ್.ಎಂ.ಹೊನ್ನಾರಡ್ಡಿ, ವಿಶ್ವನಾಥರಡ್ಡಿ ಸಾಹು, ಯುಸೂಫ್ ಸಿದ್ದಕ್ಕಿ, ಟಿ.ನಾಗೇಂದ್ರ, ವಿಶ್ವನಾಥರಡ್ಡಿ ಪಾಟೀಲ, ಎಂ.ಎನ್. ಪೂಜಾರಿ, ಲಕ್ಷ್ಮಿನಾರಾಯಣ ಕುಲಕರ್ಣಿ, ಮಲ್ಲಿಕಾರ್ಜುನ ಬುಕ್ಕಲ್, ಹೇಮರಡ್ಡಿ ಕೊಂಗಂಡಿ, ದೇವರಾಜ ಚೆಟ್ಟಿ, ಸಂತೋಷ ಸತ್ಯಂಪೇಟೆ,ಶರಣಪ್ಪ ಪ್ಯಾಟಿ, ಲಕ್ಷಿಕಾಂತ, ಸಿದ್ದೂ ಪಸ್ಪೂಲ್, ರಮೇಶ ಸೇಡಂಕರ್, ರಾಕೇಶ ಸಾಹು, ಸತ್ಯಮ್ಮ, ಬಸಪ್ಪ ರಾಂಪುರೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು