ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ | ‘ಶೋಷಣೆ ಮುಕ್ತ ಸಮಾಜಕ್ಕೆ ಕಾನೂನು ಜ್ಞಾನ ಅಗತ್ಯ’

ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮ
Published 9 ನವೆಂಬರ್ 2023, 16:17 IST
Last Updated 9 ನವೆಂಬರ್ 2023, 16:17 IST
ಅಕ್ಷರ ಗಾತ್ರ

ಶಹಾಪುರ: ‘ಜನಸಾಮಾನ್ಯರಿಗೆ ಅವರ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಕಾನೂನು ಸೇವೆಗಳ ಮುಖ್ಯ ಉದ್ದೇಶವಾಗಿದೆ. ಶೋಷಣೆ ಮುಕ್ತ ಸಮಾಜಕ್ಕೆ ಕಾನೂನು ಜ್ಞಾನ ಅಗತ್ಯವಾಗಿದೆ. ಕಾನೂನು ಪಾಲಿಸುವವರನ್ನು ಕಾನೂನು ರಕ್ಷಿಸುತ್ತದೆ’ ಎಂದು ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಸಿದ್ಧರಾಮ ಟಿ.ಪಿ. ತಿಳಿಸಿದರು.

ನಗರದ ಎಸ್.ಬಿ. ದೇಶಮುಖ ಕಾಲೇಜಿನಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಎಸ್.ಬಿ. ದೇಶಮುಖ ಕಾಲೇಜ ಅವರ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಜಾರಿಗೆ ಬಂದಾಗಿನಿಂದ ಆರ್ಥಿಕವಾಗಿ ಹಿಂದುಳಿದವರಿಗೆ, ಜಾತಿ ಧರ್ಮರಹಿತವಾಗಿ ಕಾನೂನು ನೆರವು ಸಿಗುತ್ತಿದೆ. ವಿಶೇಷವಾಗಿ ಮಹಿಳೆಯರು, ಅಂಗವಿಕಲರು ಮತ್ತು ದುರ್ಬಲ ವರ್ಗದವರಿಗೆ ಮತ್ತು ಕಾನೂನು ಅಗತ್ಯವಿರುವವರು ಕಾನೂನು ಸೇವೆಗಳ ಪ್ರಯೋಜನ ಪಡೆದುಕೊಂಡು ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು. ಕಾಲೇಜು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಸಮುದಾಯ ಸಾಮಾನ್ಯ ಶಿಕ್ಷಣದ ಜತೆ ಕಾನೂನು ಮಾಹಿತಿ ಪಡೆದುಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ನಿರ್ವಹಿಸಬೇಕು’ ಎಂದರು.

ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ, ಕಾಲೇಜಿನ ಮುಖ್ಯಸ್ಥ ಶಿವರಾಜ ದೇಶಮುಖ, ಎಪಿಪಿ ದಿವ್ಯಾರಾಣಿ ನಾಯಕ, ವೈ.ಬಿ. ದೇಸಾಯಿ, ವಕೀಲರ ಸಂಘದ ಅಧ್ಯಕ್ಷ ಸಂತೋಷ ದೇಶಮುಖ, ಸಂಘದ ಕಾರ್ಯದರ್ಶಿ ಭೀಮಣ್ಣಗೌಡ ಪಾಟೀಲ, ಅಮರೇಶ ದೇಸಾಯಿ, ಸಿದ್ದು ಪಸ್ತೂಲ್‌, ಕಾಲೇಜಿನ ಆಡಳಿತಾಧಿಕಾರಿ ರವಿ ಪಡಕನೂರ, ಸವಿತಾ ಟೋಕಾಪುರ, ಮಲ್ಲಿಕಾರ್ಜುನ ಆವಂಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT