ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನಾಪುರ ಚಾಲನೆ

Last Updated 13 ಆಗಸ್ಟ್ 2020, 15:46 IST
ಅಕ್ಷರ ಗಾತ್ರ

ಕೆಂಭಾವಿ: ಸಮೀಪದ ನಗನೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಶರಣಬಸಪ್ಪ ದರ್ಶನಾಪುರ ಬುಧವಾರ ಚಾಲನೆ ನೀಡಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಗನೂರ ಗ್ರಾಮದಲ್ಲಿ ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆಯಡಿಯಲ್ಲಿ ಸುಮಾರು ₹1 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಇದರಲ್ಲಿ ₹50 ಲಕ್ಷದಲ್ಲಿ ಸಿಸಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ, ₹15 ಲಕ್ಷದಲ್ಲಿ ಸಮುದಾಯ ಭವನ, ₹12 ಲಕ್ಷದಲ್ಲಿ ಗ್ರಂಥಾಲಯ, ₹12 ಲಕ್ಷದಲ್ಲಿ ಆಟದ ಮೈದಾನ ಸೇರಿದಂತೆ ಹಲವು ದೇವಸ್ಥಾನಗಳ ಅಭಿವೃದ್ಧಿ, ಸೌರ ವಿದ್ಯುತ್ ಕಂಬ ಜೋಡಣೆ ಕಾಮಗಾರಿಗೆ ಹಣ ಒದಗಿಸಲಾಗಿದೆ ಎಂದು ಹೇಳಿದರು.

ಸುಮಾರು ₹15 ಕೋಟಿ ವೆಚ್ಚದ ಚಾಮನಾಳ-ನಗನೂರ ಮುಖ್ಯ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕೆಲಸ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿಂತುಹೋಗಿರುವ ಕುರಿತು ಗ್ರಾಮಸ್ಥರು ಗಮನ ಸೆಳೆದಾಗ, ಅದನ್ನು ಶೀಘ್ರದಲ್ಲಿ ದುರಸ್ತಿಗೊಳಿಸಿ ನೀರು ಒದಗಿಸುವಂತೆ ಸ್ಥಳದಲ್ಲಿದ್ದ ಗ್ರಾ.ಪಂ ಆಡಳಿತ ಅಧಿಕಾರಿ ಹಾಗೂ ಪಿಡಿಒ ಅವರಿಗೆ ಸೂಚನೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಚಿಂಚೋಳಿ, ಅಶೋಕ ಸಾಹು ಗೂಗಲ್, ಶರಣಗೌಡ ವಣಿಕ್ಯಾಳ, ಗುರಪ್ಪಗೌಡ ಪೊಲೀಸ್ ಪಾಟೀಲ, ಹಳ್ಳೆಪ್ಪ ಹವಾಲ್ದಾರ, ಅಯ್ಯನಗೌಡ ಲಕ್ಕುಂಡಿ, ಚೆನ್ನಾರೆಡ್ಡಿ ದೇಸಾಯಿ, ರಾಮನಗೌಡ ದೇಸಾಯಿ, ಗೌಡಪ್ಪಗೌಡ ವಣಿಕ್ಯಾಳ, ಚನ್ನಬಸವಪ್ಪ ದೇಸಾಯಿ, ಅಭಿಮನ್ಯು ವಣಿಕ್ಯಾಳ, ಶ್ರೀಮಂತ ತಿಪ್ಪಶೆಟ್ಟಿ, ಅನಂತರೆಡ್ಡಿ ಕೆಂಚಾಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT