ಭಾನುವಾರ, ಮಾರ್ಚ್ 7, 2021
19 °C

ಯಾದಗಿರಿ: ಬಿರುಗಾಳಿಗೆ ನೆಲಕ್ಕುರುಳಿದ ನಿಂಬೆ, ಮಾವಿನಕಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ ಶನಿವಾರ ಮಳೆ ಹಾಗೂ ಬಿರುಗಾಳಿಯಿಂದ ನೆಲಕ್ಕುರಳಿದ ಮಾವಿನ ಕಾಯಿ

ಶಹಾಪುರ: ತಾಲ್ಲೂಕಿನ ವನದುರ್ಗ ಸುತ್ತಮುತ್ತ ಶನಿವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಕೊಯ್ಲಿಗೆ ಬಂದಿದ್ದ ಮಾವಿನಕಾಯಿ ನೆಲಕ್ಕುರುಳಿವೆ. ಅಲ್ಲದೆ ಜೋರಾಗಿ ಬೀಸಿದ ಗಾಳಿಯಿಂದ ನಿಂಬೆಗಿಡ ಬುಡ ಸಮೇತ ನೆಲಕ್ಕೆ ಬಿದ್ದಿವೆ.

ಬೆಳಿಗ್ಗೆಯಿಂದ ಹೆಚ್ಚಿನ ತಾಪಮಾನವಿತ್ತು. ಸಂಜೆ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣ ಉಂಟಾಗಿ ಜೋರಾಗಿ ಗಾಳಿ ಬೀಸುವುದರ ಜೊತೆಗೆ ಸುಮಾರು ಅರ್ಧಗಂಟೆ ಮಳೆ ಸುರಿಯಿತು. ಜಮೀನುಗಳಲ್ಲಿ ರೈತರು ಹಾಕಿದ್ದ ಮಾವಿನ ಗಿಡದಲ್ಲಿ ಹೆಚ್ಚಿನ ಪ್ರಮಾಣದ ಕಾಯಿ ಇದ್ದವು. ಗಾಳಿಯ ರಭಸಕ್ಕೆ ಕಾಯಿ ನೆಲದ ಪಾಲಾಗಿವೆ. ಇದರಿಂದ ಮಾವು ರೈತ ಪಾಲಿಗೆ ಹುಳಿಯಾಗಿದೆ.

ಅಲ್ಲದೆ ನಿಂಬೆ ಹಣ್ಣಿನ ಕಾಯಿ ಉದುರುವುದರ ಜೊತೆಗೆ ಗಿಡವು ಬುಡ ಸಮೇತ ಕಿತ್ತು ಬಿದ್ದಿವೆ ಇದರಿಂದ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ ಎನ್ನುತ್ತಾರೆ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.