ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಿಚಕ್ರ: ಚಿರತೆ ಪ್ರತ್ಯಕ್ಷ ವದಂತಿ

Last Updated 21 ಆಗಸ್ಟ್ 2021, 1:17 IST
ಅಕ್ಷರ ಗಾತ್ರ

ಬಳಿಚಕ್ರ(ಸೈದಾಪುರ): ಸಮೀಪದ ಬಳಿಚಕ್ರ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ವದಂತಿ ಕೇಳಿ ಗ್ರಾಮದ ಜನರು ಭಯ ಭೀತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ಡಂಗೂರ ಸಾರಿ ಯಾರು ರಾತ್ರಿ ಸಮಯದಲ್ಲಿ ಗ್ರಾಮಸ್ಥರು ತಮ್ಮ ಹೊಲ-ಗದ್ದೆಗಳಿಗೆ ಹೋಗಬಾರದು. ದನಕರುಗಳನ್ನು ನಿಮ್ಮ ಮನೆಯ ಒಳಗಡೆ ಕಟ್ಟಿಕೊಳ್ಳಬೇಕು. ಸಾರ್ವಜನಿಕರು ಯಾರು ಕೂಡ ಹೊರಗಡೆ ತಿರುಗಾಡಬಾರದು ಎಂದು ತಿಳಿಸಲಾಗಿದೆ.‌

ಶುಕ್ರವಾರ ಸಂಜೆ 6ಕ್ಕೆ ಗ್ರಾಮದ ಮಶೆಮ್ಮ ಬೆಟ್ಟದಲ್ಲಿ ಚಿರತೆ ಇರುವುದು ಕೆಲವರು ನೋಡಿದ್ದಾರೆ. ಪೊಲೀಸ್ ಸಿಬ್ಬಂದಿ ಹಾಗೂ ಯಾದಗಿರಿಯ ಅರಣ್ಯ ಇಲಾಖೆಯ 3 ಜನ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಶನಿವಾರ ಸ್ಥಳಕ್ಕೆ ಬಂದು ಪರಿಶೀಲಿಸಿ ಅದನ್ನ ಸೆರೆ ಹಿಡಿಯುವ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅರಣ್ಯ ರಕ್ಷಕ ಪರಶುರಾಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT