ಯಾದಗಿರಿ: ಜಿಲ್ಲೆಯ ಕಕ್ಕೇರಾ ಮತ್ತು ಕೆಂಬಾವಿ ಪುರಸಭೆಗಳ ಚುನಾವಣೆ ಹಾಗೂ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ತೆರವಾದ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಸೋಮವಾರ (ಡಿ.27) ಮತದಾನ ನಡೆಯಲಿದ್ದು, ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕಕ್ಕೇರಾ ಮತ್ತು ಕೆಂಬಾವಿ ವ್ಯಾಪ್ತಿಯಲ್ಲಿ ಕ್ರಮವಾಗಿ 24 ಮತ್ತು 23 ಮತಗಟ್ಟೆಗಳು ತೆರೆಯಲಾಗಿದೆ. ವಿವಿಧ ಗ್ರಾಮ ಪಂಚಾಯಿತಿಗಳಿಗೂ ಮತದಾನ ನಡೆಯಲಿದೆ. ಗುರುಮಿಟಕಲ್ ತಾಲ್ಲೂಕಿನ ಚಂಡ್ರಿಕಿಯ ಕೇಶ್ವಾರ ಕ್ಷೇತ್ರ 7, ಶಹಾಪುರ ತಾಲ್ಲೂಕಿನ ಕನ್ಯಾಕೊಳ್ಳುರ ಕ್ಷೇತ್ರ 3, ವಡಗೇರಾ ತಾಲ್ಲೂಕಿನ ಕುರಕುಂದಾ ಕ್ಷೇತ್ರ 3, ಸುರಪುರ ತಾಲ್ಲೂಕಿನ ದೇವಾಪುರದ ಅರಳಹಳ್ಳಿ ಕ್ಷೇತ್ರ 5, ಹುಣಸಗಿ ತಾಲ್ಲೂಕಿನ ಆಗ್ನಿಯ ಕರಿಭಾವಿ ಕ್ಷೇತ್ರ5ರ ತಲಾ ಒಂದರಂತೆ ಒಟ್ಟು 52 ಮತಗಟ್ಟೆ ಸ್ಥಾಪಿಸಲಾಗಿದೆ.

ಶಾಂತಿಯುತ ಮತದಾನಕ್ಕಾಗಿ ಒಬ್ಬ ಡಿಎಸ್ಪಿ, ನಾಲ್ವರು ಪಿಐಸಿ/ಪಿಐ, 13 ಪಿಎಸ್ಐ, 16 ಎಎಸ್ಐ 42 ಎಚ್ಸಿ, 68 ಪಿಸಿ ಮತ್ತು 2 ಡಿಎಆರ್ ಹಾಗೂ 2 ಕೆಎಸ್ಆರ್ಪಿ ದಳ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಮತಗಟ್ಟೆಗಳ ಸುತ್ತ 200 ಮೀಟರ್ ವ್ಯಾಪ್ತಿಗೆ ನಿಷೇದಾಜ್ಞೆ (144) ಅನ್ವಯವಾಗಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಕೆಂಭಾವಿ; 7 ಸೂಕ್ಷ್ಮ ಮತಗಟ್ಟೆ
ಕೆಂಭಾವಿ: ಇಂದು ನಡೆಯಲಿರುವ ಪುರಸಭೆ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಪಟ್ಟಣದ 23 ವಾರ್ಡ್ಗಳಲ್ಲಿ 48 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದಾರೆ. ಈಗಾಗಲೇ ಒಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 22 ಸ್ಥಾನಗಳಿಗೆ ಮತದಾನ ನಡೆಯಲಿದೆ. ಎರಡು ಅತಿಸೂಕ್ಷ್ಮ, ಏಳು ಸೂಕ್ಷ್ಮ ಮತಗಟ್ಟೆ ಸೇರಿ ಒಟ್ಟು 23 ಮತಗಟ್ಟೆ ಕೇಂದ್ರಗಳು ತೆರೆಯಲಾಗಿದೆ.

ಭಾನುವಾರ ತಾಲ್ಲೂಕು ಕೇಂದ್ರ ಸುರಪುರದಲ್ಲಿ ಮಸ್ಟರಿಂಗ್ ಪೂರ್ಣಗೊಂಡಿತು. ಮತಗಟ್ಟೆ ಅಧಿಕಾರಿಗಳು ಆಗಮಿಸಿದರು. ಮತಗಟ್ಟೆ ಕೇಂದ್ರಗಳಲ್ಲಿ ಕುಡಿಯುವ ನೀರು, ವಿದ್ಯುತ್ ಹಾಗೂ ಮತದಾರರಿಗೆ ಸಾಲುಗಟ್ಟಿ ನಿಲ್ಲಲು ಅನುಕೂಲವಾಗುವಂತೆ ಶಾಮಿಯಾನ ಹಾಕುವ ಕಾರ್ಯ ಪೂರ್ಣಗೊಳಿಸಿದ್ದಾರೆ. ಡಿ. 30ರಂದು ತಾಲ್ಲೂಕು ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ನಡೆದು, ಫಲಿತಾಂಶ ಹೊರಬೀಳಲಿದೆ.

ಕಕ್ಕೇರಾ; 51 ಅಭ್ಯರ್ಥಿಗಳು ಸ್ಪರ್ಧೆ
ಕಕ್ಕೇರಾ: ಸ್ಥಳೀಯ ಪುರಸಭೆ ಚುನಾವಣೆಯ ಮತದಾನವು ಸೋಮವಾರ (ಡಿ.27) ಬೆಳಿಗ್ಗೆ 7ರಿಂದ ಸಂಜೆ 5ರ ವರೆಗೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

23 ಸ್ಥಾನಗಳಿಗೆ 23 ಬಿಜೆಪಿ, 23 ಕಾಂಗ್ರೆಸ್, 2 ಜೆಡಿಎಸ್ ಹಾಗೂ ಮೂವರು ಪಕ್ಷೇತರರು ಸೇರಿ ಒಟ್ಟು 51 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 9,239 ಪುರುಷರು, 9,069 ಮಹಿಳೆಯರು ಹಾಗೂ 1 ಇತರೆ ಮತದಾರರು ತಮ್ಮ ಹಕ್ಕು ಚಲಾಯಿಸುವರು.

ಅಂಬೇಡ್ಕರ್ ನಗರ, ದಳಾರದೊಡ್ಡಿ, ಕಕ್ಕೇರಾತಾಂಡ, ಪೀರನಾಯ್ಕ ತಾಂಡ, ಬನದೊಡ್ಡಿ ಹಾಗೂ ನಿಂಗಾಪೂರ(ಎಂ) ಅತಿಸೂಕ್ಷ್ಮ, ಹಳೆ ಬಜಾರ್, ಗುರಿಕಾರ ಓಣಿ, ಶೆಟ್ಟರ ಓಣಿ, ಸೋಮನಾಥ ಗುಡಿ ಏರಿಯಾ, ಜಂಗಣ್ಣರದೊಡ್ಡಿ, ಮಂಜಲಾಪೂರ ಸೂಕ್ಷ್ಮ ಹಾಗೂ ಎಂಎಂದೊಡ್ಡಿ, ಬೂದನೂರದೊಡ್ಡಿ, ಬೂದಗುಂಪಿದೊಡ್ಡಿ, ಪ್ಯಾಟಿ ಓಣಿ, ಶೆಟ್ಟರ ಓಣಿ ಪೂರ್ವದಿಕ್ಕು, ಹೊಸ ಬಸ್ ನಿಲ್ದಾಣ ಏರಿಯಾ, ಕಿಲ್ಲೇದಗಡ್ಡಿ, ಯುಕೆಪಿ ಕ್ಯಾಂಪ್ ಸಾಮಾನ್ಯ ಮತಗಟ್ಟೆಗಳಾಗಿ ಗುರುತಿಸಲಾಗಿದೆ.

ಎಲ್ಲ ಮತಗಟ್ಟೆ ಕೇಂದ್ರಗಳಿಗೆ ಚುನಾವಣಾಧಿಕಾರಿಗಳು ಭೇಟಿ ನೀಡಿ, ಅಗತ್ಯ ಸೌಲಭ್ಯಗಳ ಪರಿಶೀಲಿಸಿದರು.

ಎಲ್ಲ ವಾರ್ಡ್ಗಳ ಮತಗಟ್ಟೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ ಮಾಡಲಾಗಿದೆ. ನಾಲ್ವರು ಸಿಪಿಐ, 6 ಪಿಎಸ್ಐ, ಎಎಸ್ಐ, ಕಾನ್ಸ್ಟೆಬಲ್, ಮಹಿಳಾ ಪೊಲೀಸರು, 2 ಕೆಎಸ್ಆರ್ಪಿ, 2 ಡಿಆರ್ ತುಕ ನಿಯೋಜಿಸಲಾಗಿದೆ ಎಂದು ಠಾಣಾಧಿಕಾರಿ ಬಾಷು ಮಿಯಾ ಕೊಂಚೂರ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.