ಮಂಗಳವಾರ, ಜೂನ್ 22, 2021
22 °C

ಲಾಕ್‌ಡೌನ್: ಜನ ಸಂಚಾರ ವಿರಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಲಾಕ್‌ಡೌನ್ ಕಟ್ಟುನಿಟ್ಟಿನ ಜಾರಿಗಾಗಿ ಅಧಿಕಾರಿಗಳು, ಪೊಲೀಸರು ಶ್ರಮಿಸುತ್ತಿದ್ದು, ಜನ ಸಂಚಾರ ವಿರಳವಾಗಿದೆ.

ಬೆಳಿಗ್ಗೆ 9 ಗಂಟೆ ವರೆಗೆ ಜನ ಸಂಚಾರ ಮಾಡುತ್ತಿದ್ದರು. 10 ಗಂಟೆಯಾಗುತ್ತಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಜನರು ರಸ್ತೆಯಲ್ಲಿ ಓಟಾಟ ಕಡಿಮೆ ಮಾಡಿದ್ದರು.

ಪ್ರಮುಖ ರಸ್ತೆಗಳ ವೃತ್ತಗಳ ಬಳಿ ಪೊಲೀಸರು, ಅಧಿಕಾರಿಗಳ ನಿಯಮ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡುತ್ತಿದ್ದರು.

ನೇತಾಜಿ ಸುಭಾಷಚಂದ್ರಬೋಸ್‌ ವೃತ್ತದಲ್ಲಿ ಜನ ಸಂಚಾರ ಇಲ್ಲದಿದ್ದರಿಂದ ಬಿಕೋ ಎನ್ನುತ್ತಿತ್ತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರಿಂದ ಜನ ಸಂಚಾರವೇ ಇರಲಿಲ್ಲ.

ರೈಲ್ವೆ ನಿಲ್ದಾಣದಲ್ಲಿ ಪರೀಕ್ಷೆ: ವಿವಿಧ ರೈಲುಗಳ ಮೂಲಕ ಜಿಲ್ಲೆಗೆ ಆಗಮಿಸಿದ ಜನರಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತಿದೆ.

ಆಟೊಗಳ ಆವಲಂಬನೆ: ಲಾಕ್‌ಡೌನ್‌ ಕಾರಣದಿಂದ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಆಪೆ, ಟಂಟಂ ಆಟೊಗಳನ್ನು ಜನತೆ ಅವಲಂಬಿಸಿದ್ದಾರೆ. ದೂರದ ಊರಿಗೆ ತೆರಳಲು ಆಟೊಗಳು ಮಾತ್ರ ಓಡಾಟ ನಡೆಸುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು