ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‍ಡೌನ್ ಉಲ್ಲಂಘನೆ; ₹1.26 ಲಕ್ಷ ದಂಡ

Last Updated 16 ಜುಲೈ 2020, 17:39 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್-19 ಸಂಬಂಧ ಜಿಲ್ಲೆಯಲ್ಲಿ ಒಂದು ವಾರ ಲಾಕ್‍ಡೌನ್ ಜಾರಿಗೊಳಿಸಲಾಗಿದ್ದು, ಜುಲೈ 16ರಂದು ಲಾಕ್‍ಡೌನ್ ಉಲ್ಲಂಘನೆ ಮಾಡಿರುವ ಪ್ರಕರಣಗಳಲ್ಲಿ ₹1,26,400 ದಂಡ ವಿಧಿಸಲಾಗಿದೆ ಎಂದುಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ₹69,400 ದಂಡ ವಿಧಿಸಲಾಗಿದೆ. ಅದೇ ತರಹ ಜಿಲ್ಲಾ ಪೊಲೀಸ್ ವತಿಯಿಂದ ಮಾಸ್ಕ್ ಧರಿಸದ 318 ಸಾರ್ವಜನಿಕರಿಗೆ ₹37,900 ದಂಡ ವಿಧಿಸಲಾಗಿದೆ. ಅಂತರ ಕಾಪಾಡದ 37 ಜನರಿಗೆ ₹10,400 ದಂಡ ಹಾಕಲಾಗಿದೆ. ತಂಬಾಕು, ಗುಟ್ಕಾ, ಪಾನ್ ಹಾಗೂ ಮದ್ಯಪಾನ ಸೇವನೆ ಮಾಡಿದ್ದ 35 ಸಾರ್ವಜನಿಕರಿಗೆ ₹8,700 ದಂಡ ವಿಧಿಸಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ತುರ್ತು ಕೆಲಸಕ್ಕೆ ಹೊರತುಪಡಿಸಿ ಬೇರೆ ಕೆಲಸಕ್ಕೆ ಹೊರಬಂದಿದ್ದಲ್ಲಿ ಅಂಥವರ ವಿರುದ್ಧ ಕೇಸ್ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT