ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ಸಮ್ಮೇಳನದ ಲಾಂಛನ ಬಿಡುಗಡೆ

ವಡಗೇರಾ: ಮಾರ್ಚ್ 4ರಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Last Updated 19 ಫೆಬ್ರುವರಿ 2023, 5:04 IST
ಅಕ್ಷರ ಗಾತ್ರ

ವಡಗೇರಾ: ಪಟ್ಟಣದಲ್ಲಿ ಮಾರ್ಚ್ 4 ರಂದು ನಡೆಯುವ ತಾಲ್ಲೂಕು ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ ಹೇಳಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧಿಕೃತ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಈ ಲಾಂಛನದಲ್ಲಿ ಈ ಭಾಗದ ಐತಿಹಾಸಿಕ ಪ್ರಸಿದ್ಧ ದೇವಸ್ಥಾನಗಳಾದ ಸಂಗಮದ ಸಂಗಮನಾಥ ಹಯ್ಯಾಳ (ಬಿ) ಗ್ರಾಮದಲ್ಲಿರುವ ಹಯ್ಯಾಳಲಿಂಗೇಶ್ವರ, ಜೈನಮೂರ್ತಿ, ಶಿಲಾಶಾಸನ, ಸಕ್ಕರೆ ಕಾರ್ಖಾನೆ ಹಾಗೂ ಈ ಭಾಗದ ಪ್ರಮುಖ ಬೆಳೆಗಳ ಚಿತ್ರಗಳು ಲಾಂಛನದಲ್ಲಿವೆ ಎಂದು ತಿಳಿಸಿದರು.

ಪಟ್ಟಣದಲ್ಲಿ ನಡೆಯುವ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಿಂದ ಹೊರಟು ಸ್ವಾಮಿ ವಿವೇಕಾನಂದ ಶಾಲೆಯ ಆವರಣದಲ್ಲಿ ಆಯೋಜಿಸಿರುವ ಸಮ್ಮೇಳನದ ಸ್ಥಳದವರೆಗೆ ನಡೆಯುತ್ತದೆ. ಕಲಾ ತಂಡಗಳು, ಡೊಳ್ಳು ಕುಣಿತ ಹಾಗೂ ಇನ್ನಿತರ ಕುಣಿತಗಳ ವ್ಯವಸ್ಥೆ ಮಾಡಲಾಗಿದೆ
ಎಂದರು.

ಈಗಾಗಲೇ ಸಮ್ಮೇಳನದ ಮೆರವಣಿಗೆ, ವೇದಿಕೆ, ಸಲಹಾ, ಆಹಾರ, ವಸತಿ ಹಾಗೂ ಪ್ರಚಾರ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿಯೊಂದು ಸಮತಿಯಲ್ಲಿ ಸುಮಾರು ಹತ್ತರಿಂದ 12 ಜನ ಸದಸ್ಯರಿದ್ದು, ಸಾಹಿತ್ಯಾಸಕ್ತರಿಗೆ ತೊಂದರೆಯಾಗದಂತೆ ಅವರೆಲ್ಲಾ ಕಾರ್ಯವನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತಾರೆ ಎಂದು ಅವರುಹೇಳಿದರು.

ವಡಗೇರಾ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸುಮಾರ 200 ಸದಸ್ಯರಿದ್ದು, ಅವರೆಲ್ಲಾ ಸಕ್ರಿಯವಾಗಿ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಇವರ ಜತೆ ಪಟ್ಟಣದಲ್ಲಿರುವ ಕನ್ನಡ ಪರ ಸಂಘ ಸಂಸ್ಥೆಗಳ ಸಹಾಯ ಸಹಕಾರ ಪಡೆಯಲಾಗವುದು. 3,000 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನಕ್ಕೆ ಬರುವವರಿಗೆ ವಿವಿಧ ರೀತಿಯ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಈ ವೇಳೆ ಡಾ.ಸುಭಾಷ ಕರಣಿಗಿ, ಕಸಾಪ ಕೋಶಾಧ್ಯಕ್ಷ ಸುರೇಶ ತಡಿಬಿಡಿ, ಸಾಹೇಬರಡ್ಡಿ ಇಟಗಿ, ಹಣಮಂತ ಕಂಡಕ್ಟರ್, ಮರೆಪ್ಪ ಕ್ಯಾತನಾಳ, ಸಂತೋಷ ಬೊಜ್ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT