ಲಾರಿ ಹರಿದು ಮೊಸಳೆ ಸಾವು

7

ಲಾರಿ ಹರಿದು ಮೊಸಳೆ ಸಾವು

Published:
Updated:

ಶಹಾಪುರ (ಯಾದಗಿರಿ ಜಿಲ್ಲೆ): ಕೃಷ್ಣಾ ನದಿಗೆ ನಿರ್ಮಿಸಿರುವ ಗೂಗಲ್‌ ಬ್ರಿಜ್‌ ಕಂ ಬ್ಯಾರೇಜ್ ಮೇಲೆ ಭಾನುವಾರ ತಡರಾತ್ರಿ ಲಾರಿ ಹಾಯ್ದು ಮೊಸಳೆ ಮೃತಪಟ್ಟಿದೆ.

4 ವರ್ಷ ವಯಸ್ಸಿನ ಮೊಸಳೆ 2 ಕ್ವಿಂಟಲ್‌ ತೂಕವಿದೆ. 5 ಅಡಿ ಉದ್ದವಿದೆ. ಭಾರಿ ವಾಹನ ಇದರ ಬೆನ್ನು ಹಾಗೂ ತಲೆಯ ಮೇಲೆ ಹರಿದಿದ್ದು ಮುಖದ ಭಾಗ ಸಂಪೂರ್ಣ ಜಜ್ಜಿಹೋಗಿದೆ.

‘ಇದೇ ಮಾರ್ಗದಲ್ಲಿ ರಾತ್ರಿ ಸಂಚರಿಸುತ್ತಿದ್ದ ವಾಹನ ಸವಾರರು ಇಲಾಖೆ ಗಮನಕ್ಕೆ ತಂದರು. ನಿಯಮದ ಪ್ರಕಾರ ಬೆಳಿಗ್ಗೆ ಶವವನ್ನು ಸುಟ್ಟು ಹಾಕಲಾಯಿತು ಎಂದು ವಲಯ ಅರಣ್ಯ ಅಧಿಕಾರಿ ಶಾಂತರಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !