ಭಾನುವಾರ, ಮೇ 16, 2021
22 °C
ತಲಾ ₹100 ದಂಡ ವಿಧಿಸಿದ ಅಧಿಕಾರಿಗಳು, ಮಾಸ್ಕ್‌ ವಿತರಣೆ

ಲಾಠಿ ಹಿಡಿದು ದಂಡ ವಸೂಲಿ ಮಾಡಿದ ಪೌರಾಯುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣದಿಂದ ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಸ್ವತಃ ನಗರಸಭೆ ಪೌರಾಯುಕ್ತ ಭೀಮಣ್ಣ ನಾಯಕ ಅವರು ಲಾಠಿ ಹಿಡಿದು ಸಾರ್ವಜನಿಕರಿಗೆ ಮಾಸ್ಕ್‌ ಧರಿಸುವಂತೆ ಜಾಗೃತಿ ಮೂಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಯುಗಾದಿ ಹಬ್ಬದ ಕಾರಣದಿಂದ ಸಾರ್ವಜನಿಕರು ವ್ಯಾಪಾರ ಮಾಡಲು ಹಳ್ಳಿಗಳಿಂದ ತಂಡೋಪತಂಡವಾಗಿ ಗಾಂಧಿವೃತ್ತಕ್ಕೆ ಹಬ್ಬದ ಖರೀದಿಗೆ ಆಗಮಿಸಿದ್ದರು. ಕೆಲವರು ಮಾಸ್ಕ್‌ ಧರಿಸಿದರೇ ಇನ್ನು ಕೆಲವರು ಮಾಸ್ಕ್‌ ಇಲ್ಲದೆ ಹಬ್ಬದ ವ್ಯಾಪಾರ ಮಾಡಲು ಆಗಮಿಸಿದನ್ನು ಗಮನಿಸಿದ ಪೌರಾಯುಕ್ತ ಅವರಿಗೆ ಮಾಸ್ಕ್ ನೀಡಿ ದಂಡ ವಿಧಿಸಿದರು.

‘ಹಬ್ಬಗಳು ಪ್ರತಿವರ್ಷ ಬರುತ್ತವೆ ಹೋಗುತ್ತವೆ. ಆದರೆ, ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ರೋಗ ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು’ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

ಈ ವೇಳೆ ಕಂದಾಯ ಅಧಿಕಾರಿ ಅಲ್ಕೆಝಂಡರ್, ಕಂದಾಯ ನಿರೀಕ್ಷಕ ರಿಯಾಜುದ್ದೀನ್, ಹಿರಿಯ ಆರೋಗ್ಯ ನಿರೀಕ್ಷಕ ಸಲೀಂ ವುದ್ದೀನ್, ಕಿರಿಯ ಆರೋಗ್ಯ ನಿರೀಕ್ಷಕ ಸಿದ್ದಾರ್ಥ, ಪರಿಸರ ಎಂಜನಿಯರ್‌ ರವಿಂದ್ರ ಕಾಂಬಳೆ, ಶರಣಮ್ಮ, ಸುರೇಶ ವಿಭೂತಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು