ಶಹಾಪುರ: ‘ಯಮನೂರಪ್ಪ ಮುತ್ಯಾ ಅವರ 21ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ನಗರಸಭೆ ಮಾಜಿ ಅಧ್ಯಕ್ಷೆ ಲಲತಾ ಅನಪೂರ ಹೇಳಿದರು.

ತಾಲ್ಲೂಕಿನ ಮಹಲ್ ರೋಜಾ ಗ್ರಾಮದಲ್ಲಿ ಶುಕ್ರವಾರ ಯಮನೂರಪ್ಪ ಮುತ್ಯಾ ಅವರ 21ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಧ್ಯಾತ್ಮ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈಯುತ್ತಿರುವ ಮಠವು ನಾಡು ಸೇರಿದಂತೆ ಅಕ್ಕಪಕ್ಕದ ರಾಜ್ಯಗಳ ಭಕ್ತಾಧಿಗಳು ಮನೋ ಚಿಂತನೆಯನ್ನು ದೂರಮಾಡುವ ಕೆಲಸ ಮಾಡುತ್ತಿದೆ. ಆದರೆ ಮಠದ ಸ್ವಾಮೀಜಿ ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ಬಂದ ಆರೋಪಿಗಳು ಸತ್ಯಕ್ಕೆ ದೂರುವಾಗಿವೆ. ಸತ್ಯ ಯಾವಾಗಲು ಜಯ ಸಿಗುತ್ತದೆ’ ಎಂದರು.

ಮಠದ ಟ್ರಸ್ಟ್ ಸದಸ್ಯ ಭೀಮಣ್ಣ ಶಖಾಪುರ ಮಾತನಾಡಿ, ‘ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹಕ್ಕೆ ಆದ್ಯತೆ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ವ್ಯವಸ್ಥಿತ ಷಡ್ಯಂತ್ರ ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರಗಳು ನಡೆಸುತ್ತಿವೆ’ ಎಂದು ಆಕ್ರೋಶ ಹೊರ ಹಾಕಿದರು.

ನಮ್ಮ ಕರ್ನಾಟಕ ಸೇನೆಯ ರಾಜ್ಯ ಸಂಚಾಲಕ ಬಸವರಾಜ ಪಡುಕೋಟೆ, ರಾಜಗುರು ಸ್ವಾಮೀಜಿ, ಪರಶುರಾಮ ಮುತ್ಯಾ, ಅಪ್ಪುಗೌಡ ಯಾಳಗಿ, ಭಂಡಾರೆಪ್ಪ ನಾಟೇಕರ, ತಿರುಪತಿ ಹತ್ತಿಕಟಿಗಿ, ಬಸ್ಸು ರತ್ತಾಳ, ಸುನೀಲ್ ವಾಡಿ, ಭಾಗರಾಜ ದೊರಿ ಸೇರಿದಂತೆ ವಿವಿಧ ಮಠದ ಪೂಜ್ಯರು, ಗಣ್ಯರು, ಗ್ರಾಮದ ಮುಖಂಡರು, ನವ ದಂಪತಿಗಳ ಕುಟುಂಬಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.