ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಧೂರಿ ಮಲ್ಲಯ್ಯನ ಜಾತ್ರೆ

Last Updated 28 ಡಿಸೆಂಬರ್ 2019, 10:38 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಕೌಳೂರ ಗ್ರಾಮದಲ್ಲಿ ಶುಕ್ರವಾರ ಭೀಮಾ ನದಿ ತೀರದ ಗ್ರಾಮಗಳ ಭಕ್ತರ ಆರಾಧ್ಯ ದೈವ ಮಲ್ಲಯ್ಯನ ಜಾತ್ರೆ ಭಕ್ತ ಸಮೂಹದ ಮಧ್ಯೆ ಅದ್ಧೂರಿಯಾಗಿ ಜರುಗಿತು.

ಗ್ರಾಮದಲ್ಲಿ ಕಳೆದ 15 ದಿನಗಳಿಂದ ಮಲ್ಲಯ್ಯನ ಜಾತ್ರೆಗೆ ಪೂರ್ವ ಸಿದ್ಧತೆ ಮಾಡಿಕೊಂಡು ಧಾರ್ಮಿಕ ಸಂಪ್ರದಾಯದಂತೆ ಗುರುವಾರ ವಿವಿಧ ಸಂಗೀತ ವಾದ್ಯಗಳೊಂದಿಗೆ ಭಕ್ತರು ಮಲ್ಲಯ್ಯನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಗಂಗಾಸ್ನಾನಕ್ಕೆ ತೆರಳಿ ನಂತರ ಮಧ್ಯಾಹ್ನ ಗ್ರಾಮದ ಹೊರವಲಯದಲ್ಲಿರುವ ಬೀರಲಿಂಗೇಶ್ವರನ ದೇವಸ್ಥಾನದಲ್ಲಿ ತಂಗಿ ರಾತ್ರಿಯಿಡೀಮಲ್ಲಯ್ಯನ ಭಜನೆಮಾಡಿ ಶುಕ್ರವಾರ ಬೆಳಿಗ್ಗೆ 1 ಕ್ಕೆ ಮಲ್ಲಯ್ಯನ ಮದುವೆ ಕಾರ್ಯಕ್ರಮ ನೆರವೇರಿಸಿದರು.

ಶುಕ್ರವಾರ ಬೆಳಿಗ್ಗೆ ಮಲ್ಲಯ್ಯನಿಗೆ ವಿಶೇಷ ಪೂಜೆ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಭಕ್ತರು ಪಲ್ಲಕ್ಕಿಯಲ್ಲಿ ಮಲ್ಲಯ್ಯನ ಮೂರ್ತಿಯನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಲ್ಲಯ್ಯನ ಮೂಲ ದೇವಸ್ಥಾನಕ್ಕೆ ತೆರಳಿ ಮೂರ್ತಿಯನ್ನು ಮರುಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಜನರು ಮಲ್ಲಯ್ಯನದರ್ಶನ ಪಡೆದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶರಣಪ್ಪಗೌಡ ಮಾಲಿಪಾಟೀಲ, ಚನ್ನವೀರಯ್ಯ ಹಿರೇಮಠ, ಚನ್ನಪ್ಪಗೌಡ ಪಾಟೀಲ, ಸಿದ್ರಾಮರೆಡ್ಡಿಪಾಟೀಲ, ಮಲ್ಲಣ್ಣಗೌಡ ಹಳಿಮನಿ, ಮಲ್ಲಯ್ಯ ಪೂಜಾರಿ ಬಾಕಪ್ಪನೋರ, ಸಿದ್ದಪ್ಪ ಪೂಜಾರಿ,ಅಮರಪ್ಪ ಪಟ್ಟೆದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT