ಬುಧವಾರ, ಸೆಪ್ಟೆಂಬರ್ 22, 2021
29 °C

ಯಾದಗಿರಿ: 'ರನ್ ಫಾರ್ ಯುನಿಟಿ' ಮ್ಯಾರಥಾನ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ನಗರದ ಲುಂಬಿನಿ ವನದಿಂದ ಐದು ಕೀ.ಮೀ. ವ್ಯಾಪ್ತಿಯಲ್ಲಿ 'ರನ್ ಫಾರ್ ಯುನಿಟಿ' ಮ್ಯಾರಥಾನ್ ಗುರುವಾರ ನಡೆಯಿತು.

ಮ್ಯಾರಥಾನ್ ಓಟವು ಲುಂಬಿನಿವನದಿಂದ ಆರಂಭಗೊಂಡು ಶಾಸ್ತ್ರಿ ವೃತ್ತ, ಸುಭಾಷ ವೃತ್ತ, ಪದವಿ ಮಹಾವಿದ್ಯಾಲಯ ಕ್ರಾಸ್, ಕನಕ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಲುಂಬಿನಿವನ ತಲುಪಿತು. 

‌‌ಈ ವೇಳೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್, ಡಿವೈಎಸ್ಪಿ ಯು.ಶರಣಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು