ಶನಿವಾರ, ಡಿಸೆಂಬರ್ 14, 2019
22 °C

₹ 60 ಸಾವಿರ ಮೌಲ್ಯದ ಗಾಂಜಾ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ತಾಲ್ಲೂಕಿನ ಇಂಗಳಿಗಿ ಗ್ರಾಮದಲ್ಲಿ ಸಿದ್ದಪ್ಪ ಭೀಮರಾಯ ಕಂದಕೂರ ಎಂಬ ರೈತ ಹತ್ತಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ₹60 ಸಾವಿರ ಮೌಲ್ಯದ ಗಾಂಜಾ ಗಿಡಗಳನ್ನು ಭೀಮರಾಯನಗುಡಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಅಂದಾಜು 20 ಕೆ.ಜಿ  ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ60 ಸಾವಿರ ಎಂದು ಪೊಲೀಸರು ತಿಳಿಸಿದರು. ಜಪ್ತಿ ಕಾಲಕ್ಕೆ ಶಹಾಪುರ ತಹಶೀಲ್ದಾರ್ ಜಗನಾಥರಡ್ಡಿ ಇದ್ದರು. ಭೀಮರಾಯನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)