ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸಾರ ಹಬ್ಬ: ಹೆಚ್ಚಿದ ಹಣ್ಣುಗಳ ದರ, ಕಾಯಿಪಲ್ಯೆ ದರ ಏರಿಕೆ ಸಾಧ್ಯತೆ,

ಈರುಳ್ಳಿ ದರ ತಟಸ್ಥ
Last Updated 16 ಅಕ್ಟೋಬರ್ 2018, 15:21 IST
ಅಕ್ಷರ ಗಾತ್ರ

ಯಾದಗಿರಿ: ನಗರದಲ್ಲಿ ವಾರದ ಹಿಂದೆ ಒಂದು ಕೆ.ಜಿ.ಗೆ ₹60 ರಂತೆ ಮಾರಾಟವಾಗುತ್ತಿದ್ದ ನುಗ್ಗೆಕಾಯಿಗೆ ಈ ವಾರ ₹120 ರಂತೆ ಮಾರಾಟವಾಗುತ್ತಿದ್ದು, ₹40 ದರ ಏರಿಕೆಯಾಗಿದೆ. ಆದರೆ, ಉಳಿದ ಕಾತಿಪಲ್ಯೆ ದರದಲ್ಲಿ ಭಾರೀ ದರ ವ್ಯತ್ಯಾಸ ಆಗಿಲ್ಲ. ಆದರೆ, ಹಣ್ಣುಗಳ ದರವೂ ಸ್ವಲ್ಪ ಏರಿಕೆಯಾಗಿದೆ.

ಕಲಬುರ್ಗಿ, ರಾಯಚೂರು, ತೆಲಂಗಾಣದಿಂದ ಮಾರುಕಟ್ಟೆಗೆ ನುಗ್ಗೆ ಕಾಯಿ ಬರುತ್ತಿದೆ. ಪ್ರಸ್ತುತ ಬೇಡಿಕೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವ ಕಾರಣ ಬೆಲೆ ಏರಿಕೆಯಾಗಿದೆ ಎಂಬುದು ವ್ಯಾಪಾರಿ ಬಾಷಾ ಹೇಳುತ್ತಾರೆ.

ವಾರದ ಹಿಂದೆ ₹ 10ಕ್ಕೆ ಒಂದು ಕೆ.ಜಿಯಂತೆ ಮಾರಾಟವಾಗುತ್ತಿದ್ದ ಟೊಮೆಟೊ ಈ ವಾರ ₹ 10ಕ್ಕೆ ಒಂದೂವರೆ ಕೆ.ಜಿ. ಮಾರಾಟವಾಗುತ್ತಿದೆ. ಈರುಳ್ಳಿ ದರ ತಟಸ್ಥವಾಗಿದ್ದು, ಒಂದು ಕೆ.ಜಿ.ಗೆ ₹ 15 ರಂತೆ ಮಾರಾಟವಾಗುತ್ತಿದೆ.

ಬೀನ್ಸ್‌ ಒಂದು ಕೆ.ಜಿಗೆ ₹ 40, ಆಲೂಗೆಡ್ಡೆ ಒಂದು ಕೆ.ಜಿ.ಗೆ ₹ 40, ಹೀರೇಕಾಯಿ ಕೆ.ಜಿ.ಗೆ ₹ 40, ಬೆಂಡೇಕಾಯಿ ಕೆ.ಜಿ.ಗೆ ₹ 40, ಮೆಣಸಿನಕಾಯಿ ಕೆ.ಜಿಗೆ ₹30, ಕೊತ್ತಂಬರಿ ಒಂದು ಕಂತೆಗೆ ₹10, ಮೆಂತೆ, ಪಾಲಕ್‌ ಸೊಪ್ಪನ್ನು ಒಂದು ಕಂತೆಗೆ ₹ 10 ರಿಂದ ₹ 20 ರಂತೆ ಮಾರಾಟ ಮಾಡಲಾಗುತ್ತಿದೆ.

ಬಾಳೆಹಣ್ಣಿನ ದರವೂ ಕುಸಿದಿತ್ತು. ಕೆ.ಜಿಗೆ ₹50 ರೂನಂತೆ ಮಾರಾಟ ಆಗುತ್ತಿದ್ದ ಪುಟ್‌ಬಾಳೆ ಈ ವಾರ ಒಂದು ಕೆ.ಜಿ.ಗೆ ₹70 ರಂತೆ ಮಾರಾಟವಾಗುತ್ತಿದೆ. ಕೆ.ಜಿ.ಗೆ ₹20 ಏರಿಕೆಯಾಗಿದೆ. ಮೂಸಂಬಿ ಹಣ್ಣು ಕೆ.ಜಿ.ಗೆ ₹ 50 ರಂತೆ ಮಾರಾಟವಾಗುತ್ತಿದ್ದು, ₹ 10 ಇಳಿಕೆಯಾಗಿದೆ. ದಾಳಿಂಬೆ ಕೆ.ಜಿ.ಗೆ ₹ 120, ಕಿತ್ತಳೆ ಹಣ್ಣು ₹ 60, ಸಪೋಟ ಕೆ.ಜಿ.ಗೆ ₹ 80, ಸೀತಾಫಲ ಕೆ.ಜಿ.ಗೆ ₹50, ಪಪ್ಪಾಯಿ ಕೆ.ಜಿ.ಗೆ ₹ 40 ದರ ಇದೆ. ಇವು ನವರಾತ್ರಿ ಉತ್ಸವದ ಆರಂಭಕ್ಕೆ ದಿಢೀರ್‌ ದರ ಏರಿಕೆಯಾದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಅಬ್ದುಲ್‌. ಕಳೆದ ವರ್ಷದ ಇಳುವರಿಗೆ ಹೋಲಿಸಿದರೆ ಈ ಬಾರಿ ಸೀತಾಫಲ ಇಳುವರಿ ಕಡಿಮೆಯಾಗಿದೆ. ಆದ್ದರಿಂದ, ಮುಕ್ತ ಮಾರುಕಟ್ಟೆಯಲ್ಲಿ ಸೀತಾಫಲ ಒಂದು ಬುಟ್ಟಿಗೆ ₹150ರಿಂದ 200 ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT