ಗುರುವಾರ , ಅಕ್ಟೋಬರ್ 29, 2020
20 °C

ಪುತ್ರಿಯೊಂದಿಗೆ ವಿವಾಹಿತ ಮಹಿಳೆ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ಪಟ್ಟಣದ ಸಮೀಪದ ಕೆರೆ ಜಂಪಾರದೊಡ್ಡಿಯ ವಿವಾಹಿತ ಮಹಿಳೆ 5 ವರ್ಷದ ಪುತ್ರಿಯೊಂದಿಗೆ ಸೆ.8ರಂದು ನಾತ್ತೆಯಾಗಿದ್ದಾರೆ. ರೇಣುಕಾ (27) ಬಸಮ್ಮ (5) ನಾಪತ್ತೆಯಾದವರು. ನಾಪತ್ತೆ ಪ್ರಕರಣ ಕೊಡೇಕಲ್ ಠಾಣೆಯಲ್ಲಿ ದಾಖಲಾಗಿದೆ.

ರೇಣುಕಾ 5ನೇ ತರಗತಿ ಶಾಲೆ ಕಲಿತಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಿದ್ದಾರೆ. ಸಾಧಾರಣ ಮೈಕಟ್ಟು, ಕೆಂಪುಬಣ್ಣ, ದುಂಡುಮುಖವಿದ್ದು, 5 ಅಡಿ ಎತ್ತರವಿದ್ದು, ಇಲಕಲ್ ಸೀರೆ ಹಾಗೂ ಬಿಳಿ ಜಂಪಾರ ಉಡುಪು ಧರಿಸಿರುತ್ತಾರೆ. ಪುತ್ರಿ ಬಸಮ್ಮ ಗುಲಾಬಿ ಬಣ್ಣದ ಫ್ರಾಕ್ ಉಡುಪು ಧರಿಸಿರುತ್ತಾರೆ.

ಮಹಿಳೆ ಮತ್ತು ಹೆಣ್ಣು ಮಗು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಹಾಗೂ 94808 03584, 97317 33800 ಮಾಹಿತಿ ಕೊಡಬೇಕೆಂದು ಪೊಲೀಸರು ಮನವಿ  ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.