ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾದ್ಯಂತ ಹೇಮರಡ್ಡಿ ಮಲ್ಲಮ್ಮ ಸ್ಮರಣೆ

ಹೇಮರಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸರಳ ಆಚರಣೆ, ತತ್ವ ಪಾಲಿಸಲು ಕರೆ
Last Updated 10 ಮೇ 2020, 16:03 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ಅವರ ತತ್ವಗಳು ಇಂದಿಗೂಪ್ರಸ್ತುತ, ಅವುಗಳನ್ನು ಪಾಲಿಸಬೇಕು ಎಂದು ಗಣ್ಯರು ಕರೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ:ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರು ಪುಷ್ಟಾರ್ಚನೆ ಮಾಡಿದರು.

ಈ ವೇಳೆ ಸಮಾಜದ ಅಧ್ಯಕ್ಷ ರಾಮರಡ್ಡಿಗೌಡ ತಂಗಡಗಿ, ಮುಖಂಡರಾದ ರಾಚನಗೌಡ ಮುದ್ನಾಳ, ಶ್ರೀನಿವಾಸರಡ್ಡಿ ಪಾಟೀಲ ಚನ್ನೂರ, ಬಸ್ಸುಗೌಡ ಬಿಳ್ಹಾರ, ಮಲ್ಲಣಗೌಡ ಹಳಿಮನಿ, ರವಿಗೌಡ ಮಲ್ಹಾರ, ಸಿದ್ದು ಚಟ್ನಳ್ಳಿ, ಸಿದ್ದರಾಜರಡ್ಡಿ ಪಾಟೀಲ, ಡಾ.ಶಿವಪುತ್ರರಡ್ಡಿ ಪಾಟೀಲ, ವಿಶ್ವನಾಥರೆಡ್ಡಿ ಅಬ್ಬೆತುಮಕೂರ, ಅಮೀನರಡ್ಡಿ ಹಾಲಗೇರಾ, ರಮೇಶ ದೊಡ್ಮನಿ, ಸಿದ್ರಾಮರಡ್ಡಿ ಬಬಲಾದ, ಶರಣಗೌಡ ಅಲ್ಲಿಪುರ, ವಿಕ್ರಮಸಿಂಗ್, ಸಿಬ್ಬಂದಿ ವರ್ಗ ಇದ್ದರು.

ಶಾಸಕರ ಜನ ಸಂಪರ್ಕ ಕಚೇರಿ:ನಗರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಜನ ಸಂಪರ್ಕ ಕಚೇರಿಯಲ್ಲಿ ಭಾನುವಾರ ಬೆಳಿಗ್ಗೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ 598ನೇ ಜಯಂತಿ ಆಚರಿಸಲಾಯಿತು.

ಮಲ್ಲಮ್ಮಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಶಾಸಕ ಮುದ್ನಾಳ, ಮಲ್ಲಮ್ಮ ಮನುಕುಲ ಒಳಿತಿಗಾಗಿ ಸಮಾಜಕ್ಕೆ ನೀಡಿರುವ ಮಾನವೀಯ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಂಡು ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಶ್ರೀನಿವಾಸರಡ್ಡಿ ಚನ್ನೂರ, ಖಂಡಪ್ಪ ದಾಸನ್, ಮಲ್ಲಣ್ಣಗೌಡ ಹತ್ತಿಕುಣಿ, ಉಮೇಶರಡ್ಡಿ ದದ್ದಲ್, ಶರಣಗೌಡ ಕಾಳೆಬೆಳಗುಂದಿ, ಮಾರುತಿ ಕಲಾಲ್, ವಿಕಾಸ ಪಾಟೀಲ, ರುದ್ರಗೌಡ ಪಾಟೀಲ, ಸುನೀತಾ ಚವ್ಹಾಣ, ಹಣಮಂತ ಇಟಗಿ ಇದ್ದರು.

ರೆಡ್ಡಿ ಸಮಾಜದಿಂದ ದೇಣಿಗೆ:ತಾಲ್ಲೂಕು ರೆಡ್ಡಿ ಸಮಾಜದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರ ಮೂಲಕ ₹1.47 ಲಕ್ಷ ಡಿ.ಡಿಯನ್ನು ಸಮಾಜದ ಅಧ್ಯಕ್ಷ ರಾಮರೆಡ್ಡಿಗೌಡ ತಂಗಡಗಿ ನೇತೃತ್ವದಲ್ಲಿ ನೀಡಲಾಯಿತು.

ಸಮಾಜದ ಮುಖಂಡರಾದ ರಾಚನಗೌಡ ಮುದ್ನಾಳ, ಶ್ರೀನಿವಾಸರಡ್ಡಿ ಪಾಟೀಲ ಚನ್ನೂರ, ಬಸ್ಸುಗೌಡ ಬಿಳ್ಹಾರ, ಮಲ್ಲಣಗೌಡ ಹಳಿಮನಿ, ರವಿಗೌಡ ಮಲ್ಹಾರ, ಸಿದ್ದು ಚಟ್ನಳ್ಳಿ, ಸಿದ್ದರಾಜರಡ್ಡಿ ಪಾಟೀಲ, ಡಾ.ಶಿವಪುತ್ರರಡ್ಡಿ ಪಾಟೀಲ, ರಮೇಶ ದೊಡ್ಮನಿ, ಶರಣಗೌಡ ಅಲ್ಲಿಪುರ ಇದ್ದರು.

ಶ್ರೀಶೈಲಂ ಮಲ್ಲಮ್ಮ ದೇವಸ್ಥಾನ:ರಡ್ಡಿ ಸಮಾಜದ ಕುಲದೇವತೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ 598ನೇ ಜಯಂತಿಯನ್ನು ಅವರ ಕರ್ಮಭೂಮಿ ನೆರೆಯ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಮಲ್ಲಮ್ಮ ದೇವಸ್ಥಾನದಲ್ಲಿ ನೂರಾರು ಭಕ್ತರು ಶ್ರದ್ಧಾ ಭಕ್ತಿಯಿಂದ
ಆಚರಿಸಿದರು.

ಭಾನುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಮುಖ್ಯ ಅರ್ಚಕ ಗುರುಪಾದಯ್ಯಸ್ವಾಮಿ ಅವರು ಮಲ್ಲಮ್ಮ ಮೂರ್ತಿಗೆ ಹಾಗೂ ಮಲ್ಲಮ್ಮ ಕಣ್ಣೀರು ಉಗಮ ಸ್ಥಾನಕ್ಕೆ ವಿಶೇಷ ಪೂಜೆ ಕೈಂಕರ್ಯ ನೆರವೇರಿಸಿ, ನಂತರ ಅಲ್ಲಿ ಸೇರಿದ ಕನ್ನಡಿಗ ಹಾಗೂ ಆಂಧ್ರಪ್ರದೇಶದ ಭಕ್ತರಿಗೆ ಅನ್ನದಾಸೋಹ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT