ಯಾದಗಿರಿ: ‘ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಫೋಕ್ಸೊ ಪ್ರಕರಣ ದಾಖಲು ಮಾಡಬಾರದಿತ್ತು. ವಿಡಿಯೊದಲ್ಲಿ ಏನಿದೆ ಎಂಬುದನ್ನು ವಾಸ್ತವ ನೋಡದೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಟ್ವಿಸ್ಟ್ ಮಾಡಿ ಪ್ರಸಾರ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಮುತ್ಯಾ ಅವರನ್ನು ಯಾರೇ ಭೇಟಿಯಾದರೂ ಅವರನ್ನು ಹಚ್ಚಿಕೊಂಡು ಪ್ರೀತಿಯಿಂದ ಮಾತಾಡಿಸುತ್ತಾರೆ, 7 ವರ್ಷದ ಮಗುವನ್ನು ಅದೇ ಪ್ರೀತಿಯಿಂದ ಮುದ್ದು ಮಾಡಿದ್ದಾರೆ. ವಾಸ್ತವ ನೋಡದೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳು ಪ್ರಸಾರ ಮಾಡಿದರೆ ಮಗು, ಆಕೆಯ ಕುಟುಂಬದ ಸ್ಥಿತಿ ಏನಾಗಬೇಕು’ ಎಂದರು.

‘ಮಗುವಿನ ತಂದೆ– ತಾಯಿ ಕಣ್ಣೀರು ಹಾಕುತ್ತಾ ನನ್ನ ಬಳಿ ಬಂದಿದ್ದಾರೆ. ಇದರಲ್ಲಿ ಆಯೋಗಗಳು ಅವಸರ ಮಾಡಿವೆ’ ಎಂದು ಹೇಳಿದರು.

ಮೋದಿ ರಾಜೀನಾಮೆ ಯಾವಾಗ?: ‘ಬಿಜೆಪಿ ಪಕ್ಷವನ್ನು ಕಟ್ಟಿದ ಮಹಾನ್ ನಾಯಕರನ್ನು ವಯಸ್ಸಿನ ಕಾರಣಕ್ಕೆ ಹೊರಹಾಕಿದ ಪ್ರಧಾನಿ ಮೋದಿ ಅವರಿಗೆ 75 ವರ್ಷಗಳು ತುಂಬಿವೆ. ಅವರು ಯಾವಾಗ ರಾಜೀನಾಮೆ ಕೊಡುತ್ತಾರೆ’ ಎಂದು ಕೇಳಿದರು.

‘ಪಕ್ಷ ಕಟ್ಟಿ ಬೆಳೆಸಿ ಉಪಪ್ರಧಾನಿಯಾಗಿದ್ದ ಎಲ್.ಕೆ. ಅಡ್ವಾಣಿ ಅವರನ್ನು ಉಪರಾಷ್ಟ್ರಪತಿ ಮಾಡಲಿಲ್ಲ. ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಅವರನ್ನು ಹೊರ ಹಾಕಿದರು. 75 ವರ್ಷ ತುಂಬಿದ ಮೋದಿ ಅವರೂ ರಾಜೀನಾಮೆ ಕೊಡಬೇಕಲ್ಲವೇ? ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೇಳುವವರು ಈ ಬಗ್ಗೆಯೂ ಪ್ರಶ್ನಿಸಬೇಕಲ್ಲವಾ’ ಎಂದರು.

‘ಸಿಎಂ ಬದಲಾವಣೆ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಸಿಎಂ, ಡಿಸಿಎಂ ಹೇಳಿದ್ದರೂ ಮಾಧ್ಯಮಗಳು ಒಂದೂವರೆ ವರ್ಷದಿಂದ ಗಂಟು ಬಿದ್ದಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.