ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಷೇರು ಬಂಡವಾಳ₹ 608.40 ಕೋಟಿ ಹೆಚ್ಚಳ

Last Updated 2 ಜನವರಿ 2020, 11:19 IST
ಅಕ್ಷರ ಗಾತ್ರ

ಯಾದಗಿರಿ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಷೇರು ಬಂಡವಾಳವನ್ನು ₹ 150 ಕೋಟಿಯಿಂದ ₹ 608.40 ಕೋಟಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಿದೆ. ಇದರಿಂದ ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ವೇಗ ದೊರೆಯಲಿದೆ’ ಎಂದು ಪಶುಸಂಗೋಪನೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.

ನಿಗಮದಿಂದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶೈಕ್ಷಣಿಕ ಸಾಲ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಏತ ನೀರಾವರಿ ಯೋಜನೆ ಹಾಗೂ ಕೌಶಲ ಅಭಿವೃದ್ಧಿಯಂತಹ ಉಪಯುಕ್ತ ಯೋಜನೆಗಳು ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂಪಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಪ್ರಸ್ತುತ ನಿಗಮದ ಅಧಿಕೃತ ಷೇರು ಬಂಡವಾಳವು ₹ 150 ಕೋಟಿ ಇದೆ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರ ಈವರೆಗೆ ₹ 608.40 ಕೋಟಿಗಳಷ್ಟು ಬಂಡವಾಳವನ್ನು ನಿಗಮದ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲದ ರೂಪದಲ್ಲಿ ಫಲಾನುಭವಿಗಳಿಗೆ ಪಾವತಿಸಲಾಗಿದೆ. ಪಾವತಿಸಿದ ಷೇರು ಬಂಡವಾಳ ರಾಜ್ಯ ಸರ್ಕಾರ ಹೂಡಿದೆ. ಕಂಪನಿ ಕಾಯ್ದೆ 2013ರ ಪ್ರಕಾರ ಪಾವತಿಯಾದ ಬಂಡವಾಳವು ಅಧಿಕೃತ ಷೇರು ಬಂಡವಾಳ ಮೀರುವಂತಿಲ್ಲ. ಆದ್ದರಿಂದ ಕೆಎಂಡಿಸಿಯ ಅಧಿಕೃತ ಷೇರು ಬಂಡವಾಳನ್ನು ₹ 150 ಕೋಟಿಯಿಂದ ₹ 608.40 ಕೋಟಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಒಟ್ಟು ಷೇರು ಬಂಡವಾಳದಲ್ಲಿ ಶೇಕಡ 75ರಷ್ಟು ಬಂಡವಾಳವನ್ನು ಶಿಕ್ಷಣಕ್ಕಾಗಿ ಅರಿವು ಯೋಜನೆ ಅಡಿಯಲ್ಲಿ ಬಳಸಲಾಗುತ್ತದೆ’ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT