ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ: ಬ್ಯಾಡ್ಮಿಂಟನ್ ಟೂರ್ನಿಗೆ ಶಾಸಕ ಚಾಲನೆ

Last Updated 13 ಫೆಬ್ರುವರಿ 2023, 6:24 IST
ಅಕ್ಷರ ಗಾತ್ರ

ಹುಣಸಗಿ: ‘ಒತ್ತಡದ ಬದುಕಿನಲ್ಲಿಯೂ ಸದಾ ಚೈತನ್ಯದಿಂದ ಕೂಡಿರಲು ಪ್ರತಿಯೊಬ್ಬರೂ ಬಿಡುವು ಮಾಡಿಕೊಂಡು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಶಾಸಕ ನರಸಿಂಹನಾಯಕ (ರಾಜೂಗೌಡ) ಹೇಳಿದರು.

ಪಟ್ಟಣದ ಭಾಗ್ಯನಗರ(ತಾಂಡಾ) ರಸ್ತೆಯಲ್ಲಿನ ಒಳಾಂಗಣದಲ್ಲಿ ಶನಿವಾರ ಸಂಜೆ ನೀಲಕಂಠೇಶ್ವರ ಶಟಲ್ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಯುಕವರು ಇಂತಹ ಕ್ರೀಡಾಕೂಟಗಳನ್ನು ಆಗಾಗ ಆಯೋಜಿಸಬೇಕು. ಸದಾ ಕ್ರೀಡಾಪಟುಗಳಿಗೆ ಬೆಂಬಲವಾಗಿ ನಿಲ್ಲುತ್ತೇನೆ’ ಎಂದು ಭರವಸೆ ನೀಡಿದರು.

ಶಾಸಕರೊಂದಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪನಾಯಕ(ತಾತಾ), ಸುರೇಶ ಸಜ್ಜನ್, ಯಲ್ಲಪ್ಪ ಕುರುಕುಂದಿ ಬ್ಯಾಡ್ಮಿಂಟನ್‌ ಆಟವಾಡಿದರು.

ಬಿಜೆಪಿಯ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ, ಎಂ.ಎಸ್.ಚಂದಾ, ಡಾ. ವೀರಭದ್ರಗೌಡ ಹೊಸಮನಿ, ಬಿ.ಎಂ.ಅಳ್ಳಿಕೋಟಿ, ಮಲ್ಲು ನವಲಗುಡ್ಡ, ಸಂಗಮೇಶ ಹೂಗಾರ, ಕ್ಲಬ್‌ನ ಗುರುನಾಥ ಹುಲಕಲ್, ಹೊನ್ನಕೇಶವ ದೇಸಾಯಿ, ರಾಜಶೇಖರ ದೇಸಾಯಿ ಇದ್ದರು. 40ಕ್ಕೂ ಹೆಚ್ಚು ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT