ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಹೆಂಡತಿ ಇಲ್ಲ: ಚಿಂಚನಸೂರ್

Last Updated 16 ಮಾರ್ಚ್ 2019, 14:55 IST
ಅಕ್ಷರ ಗಾತ್ರ

ಯಾದಗಿರಿ: ‘ನಾನು ನರೇಂದ್ರ ಮೋದಿ ಇದ್ದಂಗೆ. ಅವರಂತೆ ನಾನೂ ಕೂಡ ತ್ಯಾಗಿ. ಆದರೆ, ಮೋದಿಗೆ ಹೆಂಡತಿ ಇಲ, ನನ್ನ ಜತೆಗೆ ನನ್ನ ಹೆಂಡತಿ ಇದ್ದಾಳೆ’ ಎಂದು ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ್ ಹೇಳಿದರು.

ಜಿಲ್ಲೆಯ ಗುರುಮಠಕಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ನರೇಂದ್ರ ಮೋದಿಯವರ ಆಡಳಿತ ವೈಖರಿ ಕುರಿತು ಬಣ್ಣಿಸುತ್ತಿದ್ದಾಗ ಕಾರ್ಯಕರ್ತರೊಬ್ಬರು, ‘ನೀವೂ ಕೂಡ ಎರಡನೇ ಮೋದಿ ಇದ್ದಂಗೆ’ ಎಂದು ಕೂಗಿದರು. ಆಗ ಈ ಮೇಲಿನಂತೆ ಚಿಂಚನಸೂರ್‌ ಹೇಳಿದರು.

‘ಉಮೇಶ್‌ ಜಾಧವ್‌ ಅವರು ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತಗೊಳ್ಳುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ಭೀತಿ ಕಾಡತೊಡಗಿದೆ. ಅವರು ಮತಕ್ಷೇತ್ರವನ್ನೇ ಬದಲಿಸುವ ಕುರಿತು ಯೋಚಿಸುತ್ತಿದ್ದಾರೆ’ ಎಂದರು.

‘ಖರ್ಗೆ ಅವರು ಶಿಥಿಲಗೊಂಡ ಪರ್ವತ ಇದ್ದಂತೆ. ಅದಕ್ಕೆ ಯಾರೂ ಕೂಡ ಡಿಕ್ಕಿ ಹೊಡೆಯುವ ಅಗತ್ಯ ಇಲ್ಲ. ಅದು ತಂತಾನೇ ಕುಸಿದು ಬೀಳಲಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಟಾಂಗ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT