ಶಹಾಪುರ: ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ 2017-18 ಮತ್ತು 2018-19ಸಾಲಿನಲ್ಲಿ 14ನೇ ಹಣಕಾಸು ಯೋಜನೆ ಅಡಿಯಲ್ಲಿ ಅವ್ಯವಹಾರ ನಡೆದ ಬಗ್ಗೆ ತನಿಖೆ ನಡೆಯಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳ ತಂಡವನ್ನು ತಾಲ್ಲೂಕು ಪಂಚಾಯಿತಿ ಇಒ ರಚಿಸಿದ್ದರು. ಆದರೆ, ತನಿಖೆಯು ಹಾದಿ ತಪ್ಪಿದೆ ಎಂಬ ದೂರು ಕೇಳಿಬಂದಿದೆ.

ಸಾಮಾಜಿಕ ಕಾರ್ಯಕರ್ತ ಹಾಗೂ ಮಾಜಿ ಸೈನಿಕ ಮಲ್ಲಣ್ಣ ಶಿರಡ್ಡಿ ಅವರು14ನೇ ಹಣಕಾಸು ಯೋಜನೆ ಅಡಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ 2019ರ ಅ.14ರಂದು ದೂರ ಸಲ್ಲಿಸಿದ್ದರು. ತಾಲ್ಲೂಕಿನ ನಾಗನಟಗಿ, ಮದ್ರಿಕಿ, ಹೊಸಕೇರಾ, ಹೊತಪೇಟ, ಖಾನಾಪುರ, ಶಿರವಾಳ, ಬಿಳಾರ, ನಾಯ್ಕಲ್, ವನದುರ್ಗ, ಹಯ್ಯಾಳ, ದೋರನಹಳ್ಳಿ, ಹತ್ತಿಗೂಡೂರ, ಇಬ್ರಾಹಿಂಪೂರ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಿಡಿಒಗಳು ಅದರಲ್ಲಿ ಶಾಮೀಲಾಗಿದ್ದಾರೆ. ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಹಣದ ದುರ್ಗಳಕೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದಾಖಲೆಯ ಸಮೇತ ದೂರು ನೀಡಿದ್ದರು.

‘ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ತಾಲ್ಲೂಕು ಪಂಚಾಯಿತಿ ಇಒಗಳಿಗೆ ಸೂಚಿಸಿದ್ದರು. ಜತೆಗೆ ಅಧಿಕಾರಿಗಳ ತಂಡವನ್ನೂ ರಚಿಸಲಾಗಿತ್ತು. ಆದರೆ, ತನಿಖಾ ತಂಡವು ಎರಡು ಗ್ರಾಮ ಪಂಚಾಯಿತಿಗಳ ಅಕ್ರಮದ ಬಗ್ಗೆ ತನಿಖೆ ನಡೆಯಿಸಿ ವರದಿ ನೀಡಿದೆ. ಉಳಿದ ಪಂಚಾಯಿತಿಗಳ ತನಿಖೆಯನ್ನು ಮುಚ್ಚಿ ಹಾಕುವ ಯತ್ನ ಸಾಗಿದೆ’ ಎನ್ನುತ್ತಾರೆ ದೂರುದಾರ ಮಲ್ಲಣ್ಣ ಶಿರಡ್ಡಿ.

ತಾಲ್ಲೂಕಿನ ನಾಗನಟಗಿ ಗ್ರಾಮ ಪಂಚಾಯಿತಿಗೆ ತನಿಖಾಧಿಕಾರಿಯಾಗಿ ನೇಮಕಗೊಂಡ ಕೈಗಾರಿಕಾ ವಿಸ್ತರ್ಣಾಧಿಕಾರಿ ಸಲ್ಲಿಸಿದ ವರದಿಯಲ್ಲಿ ₹ 53.31 ಲಕ್ಷ ಯಾವ ಉದ್ದೇಶಗಳಿಗಾಗಿ ಸೆಳೆಯಲಾಗಿದೆ? ಅದರ ವಿವರ, ವೋಚರ್ಸ್, ಕಾಮಗಾರಿ ನೋಂದಣಿ, ಹಣದ ವಿವರಗಳ ದಾಖಲೆಗಳು ಕಾರ್ಯಾಲಯದಲ್ಲಿ ನಿರ್ವಹಣೆ ಮಾಡಿರುವುದಿಲ್ಲ. ಸರ್ಕಾರಿ ಮಾರ್ಗಸೂಚಿ ನಿಯಮ ಉಲ್ಲಂಘಿಸಿ ಹಣವನ್ನು ದುರ್ಬಳಕೆ ಮಾಡಲಾಗಿದೆ. ಭ್ರಷ್ಟಾಚಾರ ಎಸಗಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬಂದಿರುತ್ತದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅದರಂತೆ ಹೊಸಕೇರಾ ಗ್ರಾಮ ಪಂಚಾಯಿತಿಯಲ್ಲಿ ಸಹ ₹34.28 ಲಕ್ಷ ದುರ್ಬಳಕೆಯಾಗಿರುವುದು ಸಹ ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂಬುದು ಅವರ ವರದಿಯಲ್ಲಿದೆ.

ಲಕ್ಷಾಂತರ ರೂಪಾಯಿ ದುರ್ಬಳಕೆ ಆಗಿದ್ದರು ಸಹ ಜಿಲ್ಲಾ ಪಂಚಾಯಿತಿ ಸಿಇಒಗೆ ತಪ್ಪು ಮಾಹಿತಿ ನೀಡಿ ಇಡೀ ಅಕ್ರಮವನ್ನು ಮುಚ್ಚಿಹಾಕುವ ಯತ್ನ ನಡೆದಿದೆ. ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ತನಿಖೆ ನಡೆಯಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೆ ಹೋದರೆ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಮಲ್ಲಣ್ಣ ಶಿರಡ್ಡಿ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕ ಹಣ ದುರ್ಬಳಕೆ ಮಾಡಿಕೊಂಡ ಅಧಿಕಾರಿ ಹಾಗೂ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗುತ್ತಿಲ್ಲ ಎಂದರು.

14ನೇ ಹಣಕಾಸು ಯೋಜನೆ ಅಡಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ನಡೆಯಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳ ತಂಡ ರಚಿಸಲಾಗಿದೆ. ಎರಡು ಪಂಚಾಯಿತಿ ಗಳ ವರದಿ ಸಲ್ಲಿಕೆಯಾಗಿದೆ.
–ಜಗನಾಥ ಮೂರ್ತಿ, ತಾ.ಪಂ ಇಒ

ಸಾಲಿನಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗೆ ಅಗತ್ಯ ದಾಖಲೆಗಳನ್ನು ಖುದ್ದಾಗಿ ಹಾಲಿ ಇರುವ ಪಿಡಿಒ ಅವರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಇಂದಿಗೂ ಸಲ್ಲಿಕೆಯಾಗಿಲ್ಲ.
–ನಾಗನಟಗಿ, ಗ್ರಾ.ಪಂ ಪಿಡಿಒ

ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿ ಹಗರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಕೇವಲ ಪತ್ರ ವ್ಯವಹಾರ ನಡೆಯಿಸಿ ಹಿಂಬರಹ ನೀಡಲು ಸಿಮೀತರಾಗಿದ್ದಾರೆ.
–ಮಲ್ಲಣ್ಣ ಶಿರಡ್ಡಿ, ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.