ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮರೆಮ್ಮ ದೇವಸ್ಥಾನ ಲೋಕಾರ್ಪಣೆ

ನಾಯ್ಕಲ್‍: ಮಹಿಳಾ ಕಲಾ ತಂಡಗಳಿಂದ ಡೊಳ್ಳು ಕುಣಿತ
Last Updated 30 ಅಕ್ಟೋಬರ್ 2020, 15:47 IST
ಅಕ್ಷರ ಗಾತ್ರ

ಯಾದಗಿರಿ: ಇಲ್ಲಿಗೆ ಸಮೀಪದ ನಾಯ್ಕಲ್ ಗ್ರಾಮದ ಮರೆಮ್ಮ ದೇವಸ್ಥಾನದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸರಳವಾಗಿ ಜರುಗಿತು.

ಗ್ರಾಮದ ಕೋಲಿ ಸಮಾಜದ ಬಡಾವಣೆಯಲ್ಲಿ ನೂತನ ಮರೆಮ್ಮ ದೇವಿಯ ಮೂರ್ತಿಯನ್ನು ಶಹಾಪುರದ ಶಿಲ್ಪಿ ಕಲಾವಿದ ನರಸಿಂಹಚಾರ್ಯ ತಯಾರಿಸಿದ್ದರು.

ನೂತನ ಮೂರ್ತಿಗೆ ಗಂಗಾಸ್ನಾನ, ಪೂಜೆ ಪುನಸ್ಕಾರಗಳು ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಗದಗ ಜಿಲ್ಲೆಯ ಕೊಣ್ಣೂರಿನ ಶ್ರೀ ಚಕ್ರ ಮಹಿಳಾ ಕಲಾ ತಂಡಗಳಿಂದ ನೃತ್ಯ, ಮುತ್ತೈದರಿಂದ ಕುಂಭ ಕಳಸ, ಅಪಾರ ಭಕ್ತರ ಮಧ್ಯೆಯೇ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ನೂತನ ದೇವಸ್ಥಾನದ ಕಟ್ಟಡಕ್ಕೆ ತಲುಪಿಸಲಾಯಿತು.

ನಂತರ ನೂತನ ದೇವಸ್ಥಾನದಲ್ಲಿ ಮರೆಮ್ಮ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

ಗ್ರಾಮದ ಪ್ರಮುಖರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಮಾರೆಡ್ಡಿಗೌಡ, ಪರಮಣ್ಣಗೌಡ ನೀಡಿಗಿ, ಶೇಖರೆಡ್ಡಿ ಮಾಯೀ, ಶರಣಭೂಪಾಲರಡ್ಡಿ ಗೋಸಾಮಿ, ಬಸವಂತ್ರಾಯಗೌಡ ವಡ್ವಡಿಗಿ, ಸುರೇಶರಡ್ಡಿ ಹಿರಿಬಿರಿ, ಮೈಹಿಪಾಲರಡ್ಡಿ ಹಿರಿಬಿರಿ, ಡಾ. ಮಲ್ಲಿಕಾರ್ಜುನ ಅನಸುಗೂರ, ವಿಶ್ವನಾಥರಡ್ಡಿ ಪಸಪುಲ, ಶರಣಪ್ಪ ಕಾಡಂಗೇರಾ, ತಿಮ್ಮಯ್ಯ ಉಪ್ಪಾರ, ಈಶಪ್ಪ ಕೂಲೂರ, ಮೋನಪ್ಪ ಗೌಂಡಿ, ಪರಮಣ್ಣ ಕೂಲೂರ, ವಿನಾಯಕ, ಮರೆಪ್ಪ ಕಂಚಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT