ಯಾದಗಿರಿ: ಗಿರಿನಗರದ ರಸ್ತೆಯಲ್ಲಿ ಬೀಡಾಡಿ ದನಗಳ ಕಾರುಬಾರು ಹೆಚ್ಚಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಕೂಡಲೇ ಗೋಶಾಲೆಗೆ ಸ್ಥಳಾಂತರ ಮಾಡಿ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ನಡು ರಸ್ತೆಯ ಮಧ್ಯದಲ್ಲಿ ಹಸುಗಳು ಮಲಗುವ ಮೂಲಕ ವಾಹನ ಸಂಚಾರಕ್ಕೆ ಅಡ್ಡಿಯಾಗಿವೆ. ಸುಭಾಷ ವೃತ್ತ ಹಾಗೂ ಲಾಲ್ಬಹದ್ದೂರ್, ಮಹಾತ್ಮ ಗಾಂಧಿ ವೃತ್ತ, ಚಕ್ರಕಟ್ಟಾ, ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್ ಹೊಸಳ್ಳಿ ಕ್ರಾಸ್, ಗಂಜ್ ಏರಿಯಾದ ಎಲ್ಲೆಂದರಲ್ಲಿ ಮುಂತಾದ ಕಡೆಗಳಲ್ಲಿ ಸಂಜೆ ಆಗುತ್ತಿದಂತೆ ಬೀದಿ ದನಗಳ ಉಪಟಳ ಹೆಚ್ಚಾಗುತ್ತಿದೆ. ಈ ಹಿಂದೆ ರಸ್ತೆ ಅಪಘಾತಗಳು ಸಂಭವಿಸಿವೆ ಎಂದು ತಿಳಿಸಿದ್ದಾರೆ.

ಆದರೆ, ಈ ಬೀದಿ ದನಕರುಗಳಿಗೆ ವಾರಸುದಾರರು ಇರುವರೋ ಇಲ್ಲವೋ ಎಂದು ನಗರಸಭೆಗೆ ತಲೆನೋವಾಗಿದೆ. ನಗರದ ಮುಖ್ಯರಸ್ತೆಯಲ್ಲಿ ಸಂಚಾರಕ್ಕೆಅಡ್ಡಿಯಾಗಿದ್ದರೂ ಯಾವ ಸಂಬಂಧವಿಲ್ಲವೆಂಬಂತೆ ಜಾಣಕುರುಡರಂತೆ ವರ್ತಿಸುತ್ತಿರುವುದು ಸಂಬಂಧಪಟ್ಟವರು ಎಷ್ಟು ಮಟ್ಟಿಗೆ ಸಮಂಜಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಚಾರಕ್ಕೆ ಅಡ್ಡಿಪಡಿಸಿ ಮಲಗಿರುವ ದನಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಾಲಾ ಮಕ್ಕಳು ಸಾರ್ವಜನಿಕರಿಗೂ ಹಾಗೂ ಪ್ರಯಾಣಿಕರ ಮತ್ತು ವೃದ್ಧರ ಗೋಳು ಯಾರು ಕೇಳುತ್ತಿಲ್ಲ. ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಳ್ಳದ ನಗರಸಭೆ ಪೌರಾಯುಕ್ತರು, ಬೀದಿ ದನಗಳ ಕಾಟ ಕಡಿವಾಣ ಹಾಕಲು ಮುಂದಾಗಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ತಕ್ಷಣ ಬೀಡಾಡಿ ದನಗಳನ್ನು ಗೋಶಾಲೆ ಸೇರಿಸಿ ಅಥವಾ ಇನ್ನಿತರ ಪರ್ಯಾಯ ವ್ಯವಸ್ಥೆ ಮಾಡಿ. ದನಗಳ ಕಾಟ ತಪ್ಪಿಸದೇ ಹೋದರ ಉಗ್ರ ಹೋರಾಟ ಮಾಡಲಾಗುತ್ತದೆ.
–ಉಮೇಶ ಕೆ. ಮುದ್ನಾಳ,ಸಾಮಾಜಿಕ ಹೋರಾಟಗಾರ ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.