ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ನಾಳ ದೊಡ್ಡ ತಾಂಡಾ: ರಂಗೋಲಿ ಸ್ಪರ್ಧೆ

Last Updated 18 ಜನವರಿ 2021, 2:37 IST
ಅಕ್ಷರ ಗಾತ್ರ

ಯರಗೋಳ: ವಿದ್ಯಾರ್ಥಿಗಳು ಉತ್ತಮ ರೀತಿಯಿಂದ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಿದಾಗ ಮೊದಲು ಸಂತೋಷ ಪಡುವವರೇ ಶಿಕ್ಷಕರು ಎಂದು ರಾಮಕೃಷ್ಣ ಆಶ್ರಮದ ಸಂಚಾಲಕ ವೇಣುಗೋಪಾಲ ಹೇಳಿದರು.

ಜಿಲ್ಲಾಡಾಳಿತ, ಕ್ರೀಡಾ ಇಲಾಖೆ ಮತ್ತು ಬಂಜಾರ ಯುವಕರ ಸಂಘದ ಸಹಯೋಗದಲ್ಲಿ ಭಾನುವಾರ ಸಮೀಪದ ಮುದ್ನಾಳ ದೊಡ್ಡ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭೂಮಿಕಾ, ದ್ವಿತೀಯ ಸ್ಥಾನ ಪಡೆದ ತನುಜಾ ಮತ್ತು ತೃತೀಯ ಸ್ಥಾನ ಪಡೆದ ಜಗದೇವಿ ಅವರಿಗೆ ಬಹುಮಾನ ವಿತರಿಸಲಾಯಿತು.

ಮುಖ್ಯಶಿಕ್ಷಕ ಜಗದೀಶ, ಆನಂದ ಎಸ್.ರಾಠೋಡ, ತರಬೇತುದಾರ ಪ್ರಕಾಶ್ ಅಂಬಾರ, ದುರ್ಗಪ್ಪ ಪೂಜಾರಿ, ಸುನಂದಾ ಬಾಯಿ, ಸಿದ್ದಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT