ಯಾದಗಿರಿ: ಜಿಲ್ಲೆಯ ಕಕ್ಕೇರಾ, ಕೆಂಭಾವಿ ಪುರಸಭೆ ಚುನಾವಣೆ ಬಿರುಸಿನಿಂದ ನಡೆಯುತ್ತಿದ್ದು, ಸೋಮವಾರ ಮಧ್ಯಾಹ್ನ 3 ಗಂಟೆಗೆ ಕೆಂಭಾವಿಯಲ್ಲಿ ಶೇ 62.99, ಕಕ್ಕೇರಾದಲ್ಲಿ ಶೇ 68.57 ಮತದಾನವಾಗಿದೆ.

ಬೆಳಿಗ್ಗೆ ಸ್ವಲ್ಪ ನಿಧಾನವಾಗಿತ್ತು. ಮಧ್ಯಾಹ್ನದಿಂದ ಮತದಾನ ಚುರುಕು ಪಡೆದಿದೆ.

ಕಕ್ಕೇರಾ ಪುರಸಭೆ ಚುನಾವಣೆಗೆ ಮತ ಚಲಾಯಿಸಲು ಮತದಾರರು ಆಸಕ್ತಿಯಿಂದ ಮತಗಟ್ಟೆಗಳಿಗೆ ಆಗಮಿಸುವುದು ಕಂಡು ಬಂದಿತು.

ಮತಗಟ್ಟೆಗಳೊಗೆ ದೂರದ ಮತದಾರರನ್ನು ತರಲು ಬೈಕ್, ಆಟೋ ಮೂಲಕ ಅಭ್ಯರ್ಥಿಗಳು ವ್ಯವಸ್ಥೆ ಮಾಡಿಸಿದ್ದು ಕಂಡು ಬಂದಿತು.

ಕೆಂಭಾವಿ ಪುರಸಭೆ ಚುನಾವಣೆಯಲ್ಲಿ ಸರದಿಯಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ.

ಕೆಂಭಾವಿಯಲ್ಲಿ 48 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಕಕ್ಕೇರಾ ಪುರಸಭೆಯಲ್ಲಿ 51 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ತಾಯಿ ಮತದಾನದಿಂದ ವಂಚಿತ

ಯಾದಗಿರಿ: ಜಿಲ್ಲೆಯ ಕಕ್ಕೇರಾ ಪುರಸಭೆಯಲ್ಲಿ ವಾರ್ಡ್ 6ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಶುರಾಮ ಅವರ ತಾಯಿ ಸಾಮವ್ವ ಮತದಾನದಿಂದ ವಂಚಿತರಾಗಿದ್ದಾರೆ.

ಕಕ್ಕೇರಾ ಪುರಸಭೆಯ ಮತಗಟ್ಟೆ ಸಂಖ್ಯೆ 4 ರಲ್ಲಿ ಮಹಿಳೆ ಹೆಸರಿನಲ್ಲಿ ನಕಲಿ ಮತದಾನ ಮಾಡಿದ ಆರೋಪ ಕೇಳಿ ಬಂದಿದ್ದು, ಮತಚಲಾಯಿಸಲು ಬಂದ ಮಹಿಳೆ ಅಚ್ಚರಿಯಾಗಿದೆ. ಸಾಮವ್ವ ಹೆಸರಿನಲ್ಲಿ ಮತ್ತೊಬ್ಬ ಮಹಿಳೆ ಮತಚಲಾವಣೆ ಮಾಡಿದ್ದಾರೆ. ನಾನು ಬಂದು ಮತ ಹಾಕಿಲ್ಲ. ಆದರೂ ನನ್ನ ಹೆಸರಿನಲ್ಲಿ ಮತಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಮತದಾನ ಮಾಡಿರುವುದಕ್ಕೆ ಸಾಮವ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೆ ಮತದಾನಕ್ಕೆ ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿ ಹಾಗೂ ಮಹಿಳೆ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.