ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್‌ಡೇಟ್ ಆಗದ ಯಾದಗಿರಿ ನಗರಸಭೆ ವೆಬ್‌ಸೈಟ್‌

ಸಮ್ಮಿಶ್ರ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಬದಲಾದರೂ ವೆಬ್‌ಸೈಟ್‌ ನವೀಕರಿಸಿಲ್ಲ
Last Updated 16 ಅಕ್ಟೋಬರ್ 2019, 11:07 IST
ಅಕ್ಷರ ಗಾತ್ರ

ಯಾದಗಿರಿ: 14 ತಿಂಗಳು ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರೇ ಇಂದಿಗೂ ಜಿಲ್ಲೆಯಲ್ಲಿ ಮುಂದುವರಿದ್ದಾರೆ!

ಹೌದು, ನಗರಸಭೆ ವೆಬ್‌ಸೈಟ್‌ನಲ್ಲಿ ಇಂದಿಗೂ ರಾಜಶೇಖರ ಪಾಟೀಲ ಅವರು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಂದು ಮೂರು ತಿಂಗಳು ಕಳೆದರೂ ನಗರಸಭೆ ವೆಬ್‌ಸೈಟ್‌ ಇನ್ನೂ ಅಪ್ಡೇಟ್‌ ಆಗಿಲ್ಲ.

ಅಲ್ಲದೆ ರಾಯಚೂರು ಸಂಸದ ರಾಜಾ ಅಮರೇಶ ನಾಯಕರ ಹೆಸರು ಬಿಟ್ಟರೆ ಫೋಟೊ ಮತ್ತು ವಿಳಾಸ, ಮೊಬೈಲ್ ಸಂಖ್ಯೆ ಇಂದಿಗೂ ಆಪ್ಡೇಟ್‌ ಮಾಡಿಲ್ಲ. ಇದರಿಂದ ವಿಷಯ ಸಂಗ್ರಹಿಸುವವರಿಗೆ ಕಕ್ಕಾಬಿಕ್ಕಿಯಾಗುವುದಲ್ಲದೆ ತಪ್ಪು ಸಂದೇಶ ರವಾನಿಸಿದಂತೆ ಆಗುತ್ತದೆ.

ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್‌ ಅವರು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದಾರೆ. ಅಲ್ಲದೆ ಜಿಲ್ಲೆಗೆ ಸಚಿವರಾಗಿ ಬಂದ ಮೊದಲ ದಿನವೇ ಜಿಲ್ಲಾಸ್ಪತ್ರೆ ಮತ್ತು ನಗರಸಭೆಗೆ ದಿಢೀರ್‌ ಭೇಟಿ ನೀಡಿ ಮೂವರನ್ನು ಅಮಾನತು ಮಾಡಲು ಆದೇಶಿಸಿದ್ದರು. ಆದರೂ ಇನ್ನೂ ನವೀಕರಣವಾಗಿಲ್ಲ.

ವರ್ಷ ಕಳೆದರೂ ಭಾವಚಿತ್ರ ಅಲಭ್ಯ: ನಗರಸಭೆಗೆ ಚುನಾವಣೆ ನಡೆದು ವರ್ಷ ಕಳೆದರೂ ಅವರ ಭಾವಚಿತ್ರ ಮತ್ತು ಮೊಬೈಲ್ ಸಂಖ್ಯೆ ಇಂದಿಗೂ ಅಲಭ್ಯ ಎಂದೇ ತೋರಿಸುತ್ತದೆ. ಅರ್ಧಕ್ಕದಷ್ಟು ನಗರಸಭೆ ಸದಸ್ಯರ ಭಾವಚಿತ್ರ ಮತ್ತು ಮೊಬೈಲ್‌ ಸಂಖ್ಯೆಗಳನ್ನು ಇನ್ನೂ ನವೀಕರಿಸಿಲ್ಲ.

ಚುನಾಯಿತರ ವೆಬ್‌ಸೈಟ್‌ ಪುಟವನ್ನು ಪ್ರಥಮ ದರ್ಜೆ ಸಹಾಯಕ ಮಾನಪ್ಪ ಇವರು ನಿರ್ವಹಿಸುವರು ಎಂದು ಇದೆ. ಆದರೆ, ಅವರು ಮೂರು ತಿಂಗಳಾದರೂ ಸಚಿವರ ಬಗ್ಗೆ ಮಾಹಿತಿ ಆಪ್ಡೇಟ್‌ಮಾಡಿಲ್ಲ.

ಅನುಪಯುಕ್ತ: ನಗರದ ವಿವಿಧ ವರ್ಗದ ಜನರು ನಗರಸಭೆ ಸದಸ್ಯರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮೊಬೈಲ್‌ ಸಂಖ್ಯೆ ನಮೂದಾಗದ ಕಾರಣ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾರ್ಡ್‌ ಮತ್ತು ಇನ್ನಿತರ ವಿಷಯಗಳಿಗೆ ನಗರಸಭೆ ಸದಸ್ಯರನ್ನು ಸಂಪರ್ಕಿಸೋಣವೆಂದರೆ ಕೈಗೆ ಸಿಗುವುದಿಲ್ಲ. ಹೀಗಾಗಿ ಅವರನ್ನು ಸಂಪರ್ಕಿಸಲು ಬೇರೆಯವರ ಬಳಿ ಕಾಡಿಬೇಡಿ ಸಂಗ್ರಹಿಸಬೇಕಿದೆ. ನಗರಸಭೆ ವೆಬ್‌ಸೈಟ್‌ ಇದ್ದರೂ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗುತ್ತಿಲ್ಲ ಎಂದು ನಗರದ ಅಯೂಬ್‌ಖಾನ್‌ ಆರೋಪಿಸಿದರು.

ಅಧಿಕಾರಿಗಳ ಸಂಪರ್ಕ ಕೋಶ:ಯಾದಗಿರಿ ಜಿಲ್ಲೆಯ ವೆಬ್‌ಸೈಟ್‌ದು ಕೂಡ ಇದೇ ಸಮಸ್ಯೆ. ಅಧಿಕಾರಿಗಳ ಸಂಪರ್ಕ ಕೋಶದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ತಹಶೀಲ್ದಾರ್‌,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ,ಜಿಲ್ಲಾ ಸರ್ಜನ್, ಜಿಲ್ಲಾ ಉಪನಿರ್ದೇಶಕರು ಸೇರಿದಂತೆ ಪ್ರಮುಖರ ಹೆಸರು ಇನ್ನೂ ಸೇರ್ಪಡೆಯಾಗಿಲ್ಲ. ಕಾಲಕಾಲಕ್ಕೆ ಯಾರೂ ಈ ಬಗ್ಗೆ ಗಮನ ಹರಿಸದಿರುವುದು ಇದಕ್ಕೆ ಮೂಲ ಸಮಸ್ಯೆಯಾಗಿದೆ.

ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಹೆಸರುಗಳು ಸೇರಿದಂತೆ ಬೆರಳೆಣಿಳಿಕೆಯಷ್ಟು ಅಧಿಕಾರಿಗಳ ಹೆಸರುಗಳು ಮಾತ್ರ ಸರಿ ಇವೆ. ಮಿಕ್ಕೆಲ್ಲ ಹೆಸರುಗಳ ಅಧಿಕಾರಿಗಳು ಬೇರೆಡೆ ವರ್ಗಾವಣೆಯಾಗಿದ್ದಾರೆ. ಅದರೂ ಇನ್ನೂ ಅಪ್‌ಡೇಟ್ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT