ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಫಲಕ ಶೇ 70ರಷ್ಟು ಕನ್ನಡದಲ್ಲಿರಲಿ: ಕರವೇ ಆಗ್ರಹ

Last Updated 24 ಅಕ್ಟೋಬರ್ 2020, 2:48 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾದ್ಯಂತ ಎಲ್ಲಕಡೆ ನಾಮಫಲಕಗಳಲ್ಲಿ ಶೇ 70ರಷ್ಟು ಕನ್ನಡಮಯ ಆಗಿರುವಂತೆ ಕ್ರಮ ಕೈಗೊಳ್ಳಬೇಕು. ಯುವ ಘಟಕದ ವತಿಯಿಂದ ಆಂಗ್ಲ ನಾಮಫಲಕಗಳಿಗೆ ಮಸಿ ಬಳಿಯಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ, ಜಿಲ್ಲೆಯ ಎಲ್ಲ ನಗರ ಗ್ರಾಮಾಂತರ ಪ್ರದೇಶಗಳಲ್ಲಿನ ಅಂಗಡಿ ಮುಂಗಟ್ಟುಗಳ ಮೇಲೆ ವ್ಯಾಪಾರಿಗಳು ಆಂಗ್ಲ ಭಾಷೆಯ ನಾಮಫಲಕ ಹಾಕಿದ್ದು, ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕನ್ನಡ ನಾಮಫಲಕ ಅಳವಡಿಸದವರ ಪರವಾನಗಿಯನ್ನು ಮುಲಾಜಿಲ್ಲದೇ ರದ್ದುಮಾಡಬೇಕು. ಕನ್ನಡಕ್ಕೆ ಪ್ರಥಮಾದ್ಯತೆ ನೀಡುವಂತೆ ಸುತ್ತೊಲೆ ಹೊರಡಿಸಬೇಕು. ಅಲ್ಲದೇ ಈ ಕುರಿತು ಜಾಗೃತಿ ಮೂಡಿಸಲು ಆಟೋದಲ್ಲಿ ಜಾಗೃತಿ ಮೂಡಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ನಗರಾಧ್ಯಕ್ಷ ರಿಯಾಜ್ ಪಟೇಲ್, ದೀಪಕ ಒಡೆಯರ್, ಅನಿಲ್ ಕುಮಾರ, ವಿಜಯ ರಾಠೋಡ, ಕಾಶಿನಾಥ ನಾನೇಕ, ಅಜರ್, ಲಿಂಗು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT