ನಾರಾಯಣಪುರ (ಹುಣಸಗಿ): ‘ರೈತರ ಸಹನೆಯ ಕಟ್ಟೆ ಒಡೆಯುವ ಮುನ್ನ ಅಧಿಕಾರಿಗಳು ಮತ್ತು ಸರ್ಕಾರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು’ ಎಂದು ಮಹೇಶ ಸುಬೇದಾರ ಹೇಳಿದರು.

ಹಿಂಗಾರು ಬೆಳೆಗಳಿಗೆ ಕಾಲುವೆ ನೀರು ಹರಿಸಲು ಒತ್ತಾಯಿಸಿ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಮುಖ್ಯ ಎಂಜಿನಿಯರ್ ಕಚೇರಿ ಎದುರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ತಾಪಮಾನ ಅಧಿಕವಾಗಿದ್ದು, ಕಾಳುಕಟ್ಟುತ್ತಿರುವ ಬೆಳೆಗಳು ಬಾಡುವ ಹಂತಕ್ಕೆ ತಲುಪುತ್ತಿವೆ. ರೈತರ ಹಿತ ಕಾಪಾಡಲು ಶೀಘ್ರವೇ ಅಧಿಕಾರಿಗಳು ಮುಂದಾಗಬೇಕು’ ಎಂದರು.

ಸ್ಥಳಕ್ಕೆ ಆಗಮಿಸಿದ್ದ ನಿಗಮದ ಎಸ್ಇ ರಮೇಶ ರಾಠೋಡ ಅವರೊಂದಿಗೆ ರಾಜ್ಯ ಸಂಚಾಲಕ ನಾಗಯ್ಯ ದೇಸಾಯಿಗುರು ಮಾತನಾಡಿ ನೀರು ಹರಿಸುವವರೆಗೂ ನಮ್ಮ ಧರಣಿ ಮುಂದುವರಿಯಲಿದೆ ಎಂದು ಹೇಳಿದರು.

ಧರಣಿಯಲ್ಲಿ ಭಾಗವಹಿಸಿದ ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರಿಗೆ ರಾಜನಕೋಳೂರು, ಬೈಲಕುಂಟಿ, ಬೊಮ್ಮಗುಡ್ಡ ಕೊಡೇಕಲ್ಲ ಗ್ರಾಮಗಳಿಂದ ರೈತ ಮಹಿಳೆಯರು ರೊಟ್ಟಿ, ಪಲ್ಯ, ಹುಣಸೆ ತೊಕ್ಕು, ಅನ್ನ ಸಾಂಬರ ಮಾಡಿಕೊಂಡು ಬುತ್ತಿತಂದು ಊಟ ಬಡಿಸಿದರು.

ಧರಣಿಯು ಬುಧವಾರ ಎರಡನೆ ದಿನ ಮುಗಿಸಿ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಗುರುಲಿಂಗಪ್ಪ ಸಜ್ಜನ, ತಾಲ್ಲೂಕು ಗೌರವಾಧ್ಯಕ್ಷ ಶಂಕರನಾಯಕ, ಮುಖಂಡರಾದ ಮಲ್ಲನಗೌಡ ಪಾಟೀಲ, ತಾಲೂಕು ಅಧ್ಯಕ್ಷೆ ಸಂಗಮ್ಮ ಮುದಗಲ್ಲ, ಪಾರ್ವತಿ ಕೊಡೇಕಲ್ಲ, ಪ್ರಭು ನವಲಿ, ಮಾಳಪ್ಪ ಕಂದಗಲ್ಲ ಸೇರದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-30-1258829905

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.