ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ತ್ರಿವರ್ಣ ಧ್ವಜ ಬೈಕ್ ಜಾಥಾ

Last Updated 16 ಆಗಸ್ಟ್ 2022, 3:53 IST
ಅಕ್ಷರ ಗಾತ್ರ

ಯಾದಗಿರಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ತ್ರಿವರ್ಣ ಧ್ವಜ ಬೈಕ್ ಜಾಥಾಕ್ಕೆ ಜಿಲ್ಲಾ ಉಸ್ತುವಾರಿ ಪ್ರಭು ಚವಾಣ್‌ ಎಪಿಎಂಸಿಯಲ್ಲಿ ಚಾಲನೆ ನೀಡಿದರು.

ಯುವ ಮುಖಂಡ ಮಹೇಶರೆಡ್ಡಿಗೌಡ ಮುದ್ನಾಳ ಅವರ ನೇತೃರತ್ವದಲ್ಲಿ ಬೃಹತ್ ಬೈಕ್ ಮೆರವಣಿಗೆ ಆರಂಭವಾದ ಜಾಥಾ ಭಾರತ ಮಾತಾಕಿ ಜೈ ಎಂಬ ಘೋಷಣೆಯೊಂದಿಗೆ ಯುವಕರು ಉತ್ಸಹದಿಂದ ಜಾಥಾದಲ್ಲಿ ಪಾಲ್ಗೊಂಡಿದರು.

ಬಸವೇಶ್ವರ ವೃತ್ತ ಗಂಜ್‌ನಿಂದ ಆರಂಭವಾದ ಬೃಹತ್ ಬೈಕ್ ರ್‍ಯಾಲಿಯು ಮೈಲಾಪುರ ಆಗಸಿ, ಚಕ್ರಕಟ್ಟಾ, ಗಾಂಧಿ ವೃತ್ತ, ಕನಕ ವೃತ್ತ, ಅಂಬೇಡ್ಕರ್, ವೃತ್ತ ಶಾಸ್ತ್ರೀ ವೃತ್ತದ ಮೂಲಕ ಸುಭಾಶ್ಚಂದ್ರ ವೃತ್ತವರೆಗೆ ನಡೆಯಿತು.

ಪೆಟ್ರೋಲ್‌ಗಾಗಿ ಮುಗಿಬಿದ್ದ ಜನ:

ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬೈಕ್‌ ರ್‍ಯಾಲಿ ಅಂಗವಾಗಿ ನಗರದ ಮುದ್ನಾಳ ಪೆಟ್ರೋಲ್‌ ಬಂಕ್‌ನಲ್ಲಿ ಯುವಜನತೆ ಪೆಟ್ರೋಲ್‌ ತುಂಬಿಸಿಕೊಳ್ಳಲು ಜಮಾಯಿಸಿದ್ದರು.


ತಲಾ ₹200 ಪೆಟ್ರೋಲ್‌ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದರು. ನೂರಾರು ಜನರು ಬಂಕ್‌ನಲ್ಲಿ ಸಾಲುಗಟ್ಟಿ ನಿಂತಿದ್ದರು.

ಜಾಥಾದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಯುಡಾ ಅಧ್ಯಕ್ಷ ರುದ್ರಗೌಡ ಪಾಟೀಲ, ಶರಣಗೌಡ ಬಾಡಿಯಾಳ, ಖಂಡಪ್ಪ‌ ದಾಸನ್, ಚಂದ್ರಕಾಂತ ಮಡ್ಡಿ, ಮಾರುತಿ ಕಲಾಲ್, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ವಿಲಾಸ ಪಾಟೀಲ, ಆನಂದ ಗಡ್ಡಿಮನಿ, ಅಜಯ ಸಿನ್ನೂರ್, ಶರಣು ಕನ್ಯಾಕೌಳೂರ, ಮಂಜುನಾಥ ಜಡಿ, ಅಜಯ ಮಡ್ಡಿ, ವಿನೋದ ಬೋವಿ, ಶ್ರೀಕಾಂತ ರಾಯಚೂರಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT