ಗುರುವಾರ , ಆಗಸ್ಟ್ 22, 2019
27 °C
ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್.ಹೇಳಿಕೆ

‘ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ’

Published:
Updated:
Prajavani

ಯಾದಗಿರಿ: ‘2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಖಾಸಗಿ ಮತ್ತು ಸಹಕಾರಿ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಲಭ್ಯ ಇದೆ. ರಸಗೊಬ್ಬರದ ಕೊರತೆ ಇಲ್ಲ’ ಎಂದು ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ ತಿಳಿಸಿದ್ದಾರೆ.

4,219 ಮೆಟ್ರಿಕ್ ಟನ್ ಯೂರಿಯಾ, 2,877 ಮೆಟ್ರಿಕ್ ಟನ್ ಡಿಎಪಿ, 1,500 ಮೆಟ್ರಿಕ್ ಟನ್ ಪೊಟ್ಯಾಷ್, 9,415 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಇದೆ. ಒಟ್ಟು 18,011 ಮೆಟ್ರಿಕ್ ಟನ್ ಸಂಗ್ರಹವಿದೆ. ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದ ಯೂರಿಯಾ ಲಭ್ಯವಿದೆ. ಮಾರಾಟಗಾರರು ಗೊಬ್ಬರ ಖರೀದಿಸುವ ರೈತರ ಮೇಲೆ ಒತ್ತಡ ಹೇರಬಾರದು’ ಎಂದು ತಿಳಿಸಿದ್ದಾರೆ.

‘ಗೊಬ್ಬರದ ಹರಳಿನ ಗಾತ್ರ ವ್ಯತ್ಯಾಸವಾದರೆ ಪೋಷಕಾಂಶಗಳ ಕೊರತೆ ಇರುವುದಿಲ್ಲ. ಬೇವು ಲೇಪಿತ ಯೂರಿಯಾ ಬಳಸುವುದರಿಂದ ಗೊಬ್ಬರದಲ್ಲಿನ ಸಾರಜನಕ ಅಂಶವು ಬೆಳೆಗಳ ಇಳುವರಿ ಹೆಚ್ಚಲು ಕಾರಣವಾಗುತ್ತದೆ’ ಎಂದರು.

ಜಂಟಿ ಕೃಷಿ ನಿರ್ದೇಶಕ ಹಾಗೂ ಉಪ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ಜಿಲ್ಲೆಯ ವಿವಿಧ ಮಾರಾಟ ಕೇಂದ್ರಗಳಿಗೆ ಹಾಗೂ ರಾಜ್ಯ ಸರ್ಕಾರಿ ಮಾರಾಟ ಮಹಾಮಂಡಳ ಗೋದಾಮಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿದರು.

Post Comments (+)