ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ: ಸದ್ಯಕ್ಕಿಲ್ಲ ನೀರಿನ ಸಂಕಷ್ಟ

ವ್ಯರ್ಥವಾದ ಬಹುಗ್ರಾಮ ನೀರಿನ ಯೋಜನೆ: ಮುಂಜಾಗ್ರತೆಗೆ ಗ್ರಾಮಸ್ಥರ ಆಗ್ರಹ
Last Updated 23 ಏಪ್ರಿಲ್ 2020, 3:34 IST
ಅಕ್ಷರ ಗಾತ್ರ

ಸೈದಾಪುರ: ‘ಪಟ್ಟಣದಲ್ಲಿ ಕಳೆದ ವರ್ಷಏಪ್ರಿಲ್‌ ಆರಂಭದಿಂದಲೇ ನೀರಿನ ಸಮಸ್ಯೆಎದುರಾಗಿ ಟ್ಯಾಂಕರ್ ಮೂಲಕವಾಗಿ ನೀರು ಪೂರೈಕೆ ಮಾಡಲಾಗಿತ್ತು. ಈ ಬಾರಿಕೊರೊನಾ ಆತಂಕದ ನಡುವೆ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಪಟ್ಟಣದ ನಾಗರಿಕರು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದಾರೆ.

‘ಪ್ರಸ್ತುತ ಬೇಸಿಗೆ ಆರಂಭವಾಗಿದ್ದರೂ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ ಎಂಬುದೇ ನೆಮ್ಮದಿಯ ವಿಷಯ. ಪಟ್ಟಣದಲ್ಲಿ 2 ಶುದ್ಧ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದಿಂದ ಪಟ್ಟಣದಲ್ಲಿರುವ ಹಾಗೂ ಸುತ್ತಲಿನ ಬಹುತೇಕ ಬಾವಿ, ಹಳ್ಳ, ಕೆರೆ, ಕೊಳ್ಳಗಳು ಸಂಪೂರ್ಣ ಬತ್ತುವ ಹಂತ ತಲುಪಿವೆ. ಇದರಿಂದ ಮುಂದಿನ ದಿನಗಳಲ್ಲಿ ಜನ–ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಬಾರದು. ಈ ನಿಟ್ಟಿನಲ್ಲಿ ಖಾಸಗಿ ಕೊಳವೆಬಾವಿಗಳನ್ನು ಲೀಸ್‍ಗೆ ಪಡೆದು ಟ್ಯಾಂಕರ್ ಮೂಲಕ ಜನರಿಗೆ ನೀರು ಒದಗಿಸಲು ಕ್ರಮ ಕೈಗೊಂಡಿದ್ದೇವೆ’ ಎಂದು ಸೈದಾಪುರ ಪಿಡಿಒ ಯಂಕಣ್ಣ ಜಲ್ಲಿ ತಿಳಿಸಿದರು.

‘ಸೈದಾಪುರ ಹೋಬಳಿಯಯಲ್ಲಿ 3498 ಮನೆಗಳು, 51 ಕೊಳವೆ ಬಾವಿಗಳು, 3 ತೆರದ ಬಾವಿಗಳು, 4 ಕುಡಿಯುವ ನೀರಿನ ಘಟಕಗಳು, 10 ಓವರ್ ಹೆಡ್ ನೀರಿನ ಟ್ಯಾಂಕ್, 5 ಕಿರು ನೀರು ಸರಬರಾಜು ಘಟಕಗಳು ಹಗೂ ಪ್ರತಿ ಹಳ್ಳಿಗಳಲ್ಲಿ ನಲ್ಲಿ ಸಂಪರ್ಕ ಇದೆ. ಸದ್ಯ ಪ್ರತಿ ದಿನ ಒಂದು ಗಂಟೆ ಕಾಲ ನೀರು ಪೂರೈಕೆ ಮಾಡುತ್ತಿರುವುದರಿಂದ ನೀರಿನ ಸಮಸ್ಯೆಆಗಿಲ್ಲ’ ಎಂದು ಅವರು ಹೇಳಿದರು.

ಬಹುಗ್ರಾಮ ಕುಡಿವ ನೀರು ಯೋಜನೆ ವ್ಯರ್ಥ: ಸೈದಾಪುರ ಸಮೀಪದ ಭೀಮಾ ನದಿ ತೀರದ 18 ಹಳ್ಳಿಗಳ ಜನತೆಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ ರಾಜೀವ ಗಾಂಧಿ ಬಹುಗ್ರಾಮ ಕುಡಿಯುವ ನೀರಿನಯೋಜನೆ ಜಾರಿ ಮಾಡಲಾಗಿದೆ. ಇದ
ಕ್ಕಾಗಿ ಆನೂರ (ಕೆ) ಹಾಗೂ ಗೊಂದಡಗಿಯಲ್ಲಿ ತಲಾ ₹ 3.25 ಕೋಟಿ ವ್ಯಯಿಸಿ, ಪ್ರತ್ಯೇಕ ನೀರಿನ ಘಟಕಗಳನ್ನು ಸ್ಥಾಪಿಸ
ಲಾಗಿದೆ. ಈ ಘಟಕಗಳು ಉದ್ಘಾಟನೆಗೂ ಮುನ್ನವೇ ಹಾಳಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಯೋಜನೆ ಜಾರಿಯಾಗಿ ಆರು ವರ್ಷಗಳಾದರೂ ಈವರೆಗೆ ಜನರಿಗೆ ನೀರು ತಲುಪಿಲ್ಲ.

ನೀರು ಸರಬರಾಜು ಮಾಡಲು ಅಳವಡಿಸಿದ್ದ ಪೈಪ್‍ಗಳು ಒಡೆದಿವೆ. ಹೊಸ ಪೈಪ್‍ಲೈನ್ ಅಳವಡಿಸುವವರೆಗೂ ನೀರುಸರಬರಾಜು ಮಾಡಲು ಸಾಧ್ಯವಿಲ್ಲ. ಹೀಗಾಗಿ, ಯೋಜನೆ ಅಡಿಯಲ್ಲಿ ನೀರುಪಡೆಯಬೇಕಿದ್ದ ಸಾವೂರ, ಕ್ಯಾತ್ನಾಳ, ಇಂದಿರಾನಗರ, ಹೆಗ್ಗಣಗೇರಾ, ಸೈದಾ
ಪುರ, ರಾಚನಹಳ್ಳಿ, ರಾಂಪುರ, ಗೊಂದಡಗಿ, ಮುನಗಾಲ, ಭೀಮನಹಳ್ಳಿ, ಬಾಡಿಯಾಲ, ಕೊಂಡಾಪುರ, ಗೂಡೂರು, ಶೆಟ್ಟಿಹಳ್ಳಿ, ಕಡೇಚೂರ ಮಾವಿನಹಳ್ಳಿ ಸೇರಿ ಒಟ್ಟು 18 ಗ್ರಾಮಗಳ ಜನ ನಿರಾಶರಾಗಿದ್ದಾರೆ.

ಈವರೆಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿಲ್ಲ. ಆದರೂ ಮುನ್ನೆಚ್ಚರಿಕೆ ವಹಿಸಿ, ಸಮಸ್ಯೆ ಪರಿಹಾರಕ್ಕೆ ಪಂಚಾಯಿತಿ ಸಿದ್ಧವಾಗಿರಬೇಕು
ರಾಜು ದೊರೆ, ಸೈದಾಪುರ ನಿವಾಸಿ

ಹೋಬಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಖಾಸಗಿ ಕೊಳವೆ ಬಾವಿಗಳನ್ನು ಲೀಸ್‍ಗೆ ಪಡೆದು ಟ್ಯಾಂಕರ್ ಮೂಲಕ ನೀರು ಪೂರೈಸುತ್ತೇವೆ-ಯಂಕಣ್ಣ ಜಲ್ಲಿ, ಪಿಡಿಒ, ಸೈದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT